Asianet Suvarna News Asianet Suvarna News

ಈ ವಿಚಾರದಲ್ಲಿ ರಾಹುಲ್ ಗಾಂಧಿಗಿಂತ ಸೋನಿಯಾ ಗಾಂಧಿ ಬೆಟರ್!

ಕಳೆದ ಮೂರು ವರ್ಷದಲ್ಲಿ ಲೋಕಸಭೆಯಲ್ಲಿ ಶೇ. 100 ರಷ್ಟು ಹಾಜರಾತಿ ಹೊಂದಿದವರ ಸಂಖ್ಯೆ ಕೇವಲ ಐದು! 545 ಸಂಸದರಲ್ಲಿ 5 ಮಂದಿ  ಮಾತ್ರ 100 ರಷ್ಟು ಹಾಜರಾತಿ ಹೊಂದಿದ್ದಾರೆ. ರಾಹುಲ್ ಗಾಂಧಿಗಿಂತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಜರಾತಿ ಪ್ರಮಾಣ ಹೆಚ್ಚಿದೆ.

Only five MPs clock 100 per cent attendance in Lok Sabha Sonia Gandhi record better than Rahul Gandhi

ನವದೆಹಲಿ (ಜೂ.04): ಕಳೆದ ಮೂರು ವರ್ಷದಲ್ಲಿ ಲೋಕಸಭೆಯಲ್ಲಿ ಶೇ. 100 ರಷ್ಟು ಹಾಜರಾತಿ ಹೊಂದಿದವರ ಸಂಖ್ಯೆ ಕೇವಲ ಐದು! 545 ಸಂಸದರಲ್ಲಿ 5 ಮಂದಿ  ಮಾತ್ರ 100 ರಷ್ಟು ಹಾಜರಾತಿ ಹೊಂದಿದ್ದಾರೆ. ರಾಹುಲ್ ಗಾಂಧಿಗಿಂತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಜರಾತಿ ಪ್ರಮಾಣ ಹೆಚ್ಚಿದೆ.

ಉತ್ತರ ಪ್ರದೇಶದ ಬಾಂದಾ ಸಂಸದ ಭೈರೋನ್ ಪ್ರಸಾದ್ ಮಿಶ್ರಾ 1468 ಚರ್ಚೆಗಳು, ಕಲಾಪದಲ್ಲಿ ಭಾಗವಹಿಸಿದ್ದು ಶೇ.100 ರಷ್ಟು ಹಾಜರಾತಿ ಹೊಂದಿದ್ದು ದಾಖಲೆ ಮಾಡಿದ್ದಾರೆ. ಇನ್ನು ರಾಜ್ಯಸಭೆಯಲ್ಲಿ ಕೇವಲ 22 ಸಂಸದರು ಅರ್ಧಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದಾರೆ. ಜಗತ್’ಸಿಂಗ್’ಪುರ್  ಬಿಜೆಡಿ ಸಂಸದ ಕುಲ್ಮಾನಿ ಸಮಲ್, ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ, ಕಿರಿತ್ ಸೋಲಂಕಿ, ಹಾಗೂ ಹರ್ಯಾಣದ ರಮೇಶ್ ಚಂದರ್ ಕೌಶಿಕ್ ಶೇ. 100 ರಷ್ಟು ಹಾಜರಾತಿ ಹೊಂದಿದ್ದಾರೆ.  

ಪ್ರಧಾನಿ ಸೇರಿದಂತೆ ಕೆಲವು ಸಚಿವರು ಹಾಜರಾತಿ ಪುಸ್ತಕಕ್ಕೆ ಪ್ರತಿದಿನ ಸಹಿ ಮಾಡಲೇಬೇಕು ಎಂಬ ಕಡ್ಡಾಯವೇನಿಲ್ಲ.  ಹಾಗಾಗಿ ಅವರ ಹಾಜರಾತಿ ದಾಖಲೆ ಲಭ್ಯವಾಗುವುದಿಲ್ಲ. ಸೋನಿಯಾ ಗಾಂಧಿ ಶೇ. 59 ರಷ್ಟು ಹಾಜರಾತಿ ಹೊಂದಿದ್ದರೆ ರಾಹುಲ್ ಗಾಂಧಿ ಶೇ. 54 ರಷ್ಟು ಹಾಜರಾತಿ ಹೊಂದಿದ್ದಾರೆ. 3 ವರ್ಷಗಳಲ್ಲಿ ಸೋನಿಯಾ ಗಾಂಧಿ 5 ಚರ್ಚೆಗಳಲ್ಲಿ ಭಾಗವಹಿಸಿದ್ದರೆ ರಾಹುಲ್ ಗಾಂಧಿ 11 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.

ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೋಯ್ಲಿ ಶೇ. 91 ಮತ್ತು ಮಲ್ಲಿಕಾರ್ಜುನ ಖರ್ಗೆ  ಶೇ.92 ರಷ್ಟು ಹಾಜರಾತಿ ಹೊಂದಿದ್ದಾರೆ.  

Follow Us:
Download App:
  • android
  • ios