ಡ್ರಗ್ಸ್ ಮಾರಾಟಕ್ಕೆ ಆನ್’ಲೈನ್ ಸುರಕ್ಷಿತ ಜಾಗ

Online Safest Way for Drugs Sale
Highlights

ಕಳೆದ ವರ್ಷ ಟಾಲಿವುಡ್‌ನ ಹಲವು ಖ್ಯಾತ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದು, ಇವರಿಗೆಲ್ಲ ಆನ್‌ಲೈನ್ ಮೂಲಕವೇ ಡ್ರಗ್ಸ್ ಸರಬರಾಜು ಆಗಿತ್ತು ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿತ್ತು. ಅತ್ಯುನ್ನತ ತಂತ್ರಜ್ಞಾನ ಬಳಸಿರುವ ಡ್ರಗ್ಸ್ ಮಾಫಿಯಾ, ‘ಡಾರ್ಕ್‌ನೆಟ್’ ಎಂಬ ವೆಬ್'ಸೈಟ್‌ನಡಿ ತನ್ನ ಜಾಲವನ್ನು ಮುನ್ನಡೆಸುತ್ತಿದೆ. ಈ ಜಾಲವನ್ನು ವಿಶ್ವದ ಅತ್ಯಾಧುನಿಕ ತನಿಖಾ ಸಂಸ್ಥೆಯೆಂಬ ಹೆಸರು ಗಳಿಸಿದ ಅಮೆರಿಕದ ಎಫ್‌ಬಿಐಗೂ (ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್) ಮಟ್ಟ ಹಾಕುವುದು ಕಷ್ಟವಾಗಿ ಪರಿಣಮಿಸಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬೆಂಗಳೂರು[ಜು.24]: ವಿಶ್ವವ್ಯಾಪಿ ಬೇರು ಬಿಟ್ಟಿರುವ ಮಾದಕ ದ್ರವ್ಯ ಸಾಗಾಟ ಆನ್‌ಲೈನ್ ಜಾಲ ರಾಜಧಾನಿ ಬೆಂಗಳೂರೂ ಸೇರಿದಂತೆ ರಾಜ್ಯಾದ್ಯಂತಹೈಟೆಕ್ ಮಾದರಿಯಲ್ಲೇ ನೆಲೆಯೂರಿದೆ. ಅಂತರ್ಜಾಲ ಈ ಜಗತ್ತಿನ ಅತಿದೊಡ್ಡ ಮಾರುಕಟ್ಟೆ. ಈ ಮಾರುಕಟ್ಟೆಯಲ್ಲಿ ರುಪಾಯಿ, ಪೌಂಡ್ ಹಾಗೂ ಡಾಲರ್‌ನಲ್ಲಿ ಡ್ರಗ್ಸ್ ವಹಿವಾಟು ನಡೆಯುತ್ತಿಲ್ಲ. ಬದಲಿಗೆ ‘ಡಾರ್ಕ್‌ನೆಟ್’ ಎಂಬ ಅನಾಮಧೇಯ ವೆಬ್‌ಸೈಟ್‌ನಡಿ ‘ಬಿಟ್ ಕಾಯಿನ್’ ಮೂಲಕ ಈ ವ್ಯವಹಾರ ನಡೆಯುತ್ತಿದೆ.

ಕಳೆದ ವರ್ಷ ಟಾಲಿವುಡ್‌ನ ಹಲವು ಖ್ಯಾತ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದು, ಇವರಿಗೆಲ್ಲ ಆನ್‌ಲೈನ್ ಮೂಲಕವೇ ಡ್ರಗ್ಸ್ ಸರಬರಾಜು ಆಗಿತ್ತು ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿತ್ತು. ಅತ್ಯುನ್ನತ ತಂತ್ರಜ್ಞಾನ ಬಳಸಿರುವ ಡ್ರಗ್ಸ್ ಮಾಫಿಯಾ, ‘ಡಾರ್ಕ್‌ನೆಟ್’ ಎಂಬ ವೆಬ್'ಸೈಟ್‌ನಡಿ ತನ್ನ ಜಾಲವನ್ನು ಮುನ್ನಡೆಸುತ್ತಿದೆ. ಈ ಜಾಲವನ್ನು ವಿಶ್ವದ ಅತ್ಯಾಧುನಿಕ ತನಿಖಾ ಸಂಸ್ಥೆಯೆಂಬ ಹೆಸರು ಗಳಿಸಿದ ಅಮೆರಿಕದ ಎಫ್‌ಬಿಐಗೂ (ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್) ಮಟ್ಟ ಹಾಕುವುದು ಕಷ್ಟವಾಗಿ ಪರಿಣಮಿಸಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಡಾರ್ಕ್‌ನೆಟ್ ಆನ್‌ಲೈನ್‌ನಲ್ಲಿ ಬಿಟ್ ಕಾಯಿನ್ ಮೂಲಕ ಗಾಂಜಾ, ಚರಸ್, ಕೊಕೇನ್, ಹೆರಾಯಿನ್, ಅಫೀಮು, ಮ್ಯಾಜಿಕ್ ಮಶ್ರೂಮ್ ಇನ್ನಿತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತದೆ. ಇಲ್ಲಿ ಗ್ರಾಹಕರು ತಮಗೆ ಬೇಕಾದ ಡ್ರಗ್ಸ್ ಆಯ್ಕೆ ಮಾಡಿಕೊಂಡ ಬಳಿಕ ನೇರವಾಗಿ ಮನೆ ಬಾಗಿಲಿಗೆ ಮಾದಕ ವಸ್ತು ಡೆಲಿವರಿ ಆಗುತ್ತದೆ. ಡಾರ್ಕ್‌ನೆಟ್ ವೆಬ್‌ಸೈಟ್‌ನಲ್ಲಿ ಲಾಗಿನ್ ಆದರೆ ಗ್ರಾಹಕರು ತಮಗೆ ಬೇಕಾದ ಡ್ರಗ್ಸನ್ನು ಆನ್‌ಲೈನ್ ಮೂಲಕ ತಾವಿರುವ ಸ್ಥಳಕ್ಕೇ ತರಿಸಿಕೊಳ್ಳಬಹುದಾಗಿದೆ. ವೆಬ್‌ಸೈಟ್‌ನಲ್ಲಿ ಅಗತ್ಯ ಮಾದಕ ವಸ್ತು ಹಾಗೂ ಅದರ ಪ್ರಮಾಣವನ್ನು ಸೂಚಿಸಬೇಕಾಗುತ್ತದೆ.

ಅದರ ಮೌಲ್ಯವನ್ನು ಬಿಟ್ ಕಾಯಿನ್ ಮೂಲಕ ಪಾವತಿಸಬೇಕು. ಸಾಮಾನ್ಯವಾಗಿ ಅಂತರ್ಜಾಲದಲ್ಲಿ ಹಣವನ್ನು ಇ-ಅಕೌಂಟ್, ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಬಹುದು.
ಈ ರೀತಿ ಮಾಡುವುದರಿಂದ ಬ್ಯಾಂಕ್ ಮೂಲಕ ನಡೆಯುವ ವಹಿವಾಟು ಪತ್ತೆ ಮಾಡಲು ಸಾಧ್ಯವಿದೆ. ಹೀಗಾಗಿ ಡ್ರಗ್ಸ್ ಗ್ರಾಹಕರು ಬಿಟ್ ಕಾಯಿನ್‌ಗೆ ಮೊರೆ ಹೋಗುತ್ತಾರೆ. ಇದು ಡಿಜಿಟಲ್
ಹಣವಾಗಿರುವುದರಿಂದ ಇದರ ಪೂರ್ವಾಪರ ಪತ್ತೆ ಮಾಡುವುದು ಸುಲಭವಲ್ಲ. ಶ್ರೀಮಂತರು, ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳು ಹೆಚ್ಚಾಗಿ ಈ ಮಾರ್ಗ ಅನುಸರಿಸುತ್ತಿದ್ದಾರೆ. ಆನ್‌ಲೈನ್ ಡ್ರಗ್ಸ್ ಜಾಲದಲ್ಲಿ ಸಿಲುಕಿರುವವರ ಪೈಕಿ ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳೇ ಹೆಚ್ಚಿದ್ದಾರೆ ಎಂದು ಕೇಂದ್ರ ಮಾದಕ ನಿಯಂತ್ರಣ ದಳ (ಎನ್‌ಸಿಬಿ) ಮೂಲಗಳು ಮಾಹಿತಿ ನೀಡಿವೆ.

ಹೇಗೆ ಮಾದಕ ವಸ್ತು ಪೂರೈಕೆಯಾಗುತ್ತದೆ?

ಆನ್‌ಲೈನ್‌ನಲ್ಲಿ ಡ್ರಗ್ಸ್ ಬುಕ್ ಮಾಡಿದ ಬಳಿಕ ಗ್ರಾಂ ಲೆಕ್ಕದಲ್ಲಿ ಯಾವುದೋ ಒಂದು ವಸ್ತುವಿನೊಳಗೆ ಇಟ್ಟು ಮಾಲುಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತದೆ.ಉದಾಹರಣೆಗೆ ಶೂ, ಬುಕ್
ಹೀಗೆ ನಾನಾ ರೀತಿಯ ವಸ್ತುಗಳನ್ನು ಉಪಯೋಗಿಸಿ ಡ್ರಗ್ಸ್ ಪೂರೈಸಲಾಗುತ್ತದೆ. ಡಾರ್ಕ್‌ನೆಟ್ ಮೂಲಕ ಕರಾಳ ದಂಧೆ ನಡೆಯುತ್ತಿದೆ ಎನ್ನುವುದು ಅಧಿಕಾರಿಗಳಿಗೆ ಗೊತ್ತಿದ್ದರೂ ಡ್ರಗ್ಸ್ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬುದನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದರ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ. ಜಾಡು ಪತ್ತೆ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ ಎನ್ನುತ್ತಾರೆ ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು.

ಏನಿದು ಡಾರ್ಕ್‌ನೆಟ್?

ಡ್ರಗ್ಸ್, ಸೆಕ್ಸ್, ಅಕ್ರಮ ಶಸ್ತ್ರಾಸ್ತ್ರ ವಹಿವಾಟು ಮಾಫಿಯಾಗಳು ಡಾರ್ಕ್‌ನೆಟ್ ಮೂಲಕ ರಹಸ್ಯ ವಹಿವಾಟು ನಡೆಸುತ್ತಿದ್ದು, ಬಿಟ್‌ಕಾಯಿನ್ ಮೂಲಕ ಪಾವತಿ ಮಾಡುತ್ತವೆ. ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ವಹಿವಾಟು ನಡೆಸಲು ಇದು ವರವಾಗಿ ಪರಿಣಮಿಸಿದೆ. ಡಾರ್ಕ್‌ನೆಟ್ ವೆಬ್‌ಸೈಟನ್ನು ಅನಾಮಧೇಯ ವ್ಯಕ್ತಿಗಳು ನಿರ್ವಹಿಸುತ್ತಿದ್ದಾರೆ. ಈ ವೆಬ್‌ಸೈಟಿಗೆ ತೆರಳಿದರೆ ಡ್ರಗ್ಸ್ ಹೇಗೆ ಖರೀದಿಸಬೇಕು, ಹೇಗೆ ಹಣ ಪಾವತಿಸಬೇಕು ಎಂಬ ಬಗ್ಗೆ ಮಾಹಿತಿ ಸಿಗುತ್ತದೆ. ವೆಬ್‌ಸೈಟ್‌ನಲ್ಲಿ ಲಾಗಿನ್ ಆಗುವ ವ್ಯಕ್ತಿಗೆ ವಿಪಿಎನ್ (್ಖಜ್ಟಿಠ್ಠಿಚ್ಝ ಕ್ಟೃಜಿಠಿಛಿ ಘೆಛಿಠಿಡಿಟ್ಟ) ಎಂಬ ಅಪ್ಲಿಕೇಷನ್ ನೀಡಲಾಗುತ್ತದೆ. ವಿಪಿಎನ್ ಹಾಕಿಕೊಂಡರೆ ವ್ಯಕ್ತಿ ತಾನು ಅಂತರ್ಜಾಲದಲ್ಲಿ ಮಾಡುವ ಯಾವುದೇ ಕೆಲಸವೂ ಸೈಬರ್ ಪೊಲೀಸರಿಗೆ ಸಿಗುವುದಿಲ್ಲ. ಹ್ಯಾಕ್ ಮಾಡಲು ಸಾಧ್ಯವಿಲ್ಲ. ಆತನ ದತ್ತಾಂಶ ಸುರಕ್ಷಿತವಾಗಿರುತ್ತದೆ ಮತ್ತು ಇಂಟರ್‌ನೆಟ್ ಸೇವೆ ನೀಡುವವರಿಗೆ ಯಾರು ಎಲ್ಲಿಂದ ಆನ್‌ಲೈನ್‌ನಲ್ಲಿ ಖರೀದಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಇದರ ಜಾಡು ಹಿಡಿದು ಹೋಗುವ ತನಿಖಾಧಿಕಾರಿಗಳಿಗೆ ಮತ್ತೊಂದು ದೇಶದಲ್ಲಿನ ವಿಳಾಸ ಕಾಣಿಸುತ್ತದೆ. ವಿಪಿಎನ್ ಬಳಕೆಯಿಂದ ನಿಮ್ಮ ದತ್ತಾಂಶವನ್ನು ಬೇರೆ ಯಾರೂ ಕೂಡ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಡಾರ್ಕ್‌ನೆಟ್ ಅಕ್ರಮಗಳಿಗೆ ತಾಣವಾಗಿದೆ. ಅಮೆರಿಕದ ಎಫ್‌ಬಿಐ ತನಿಖಾ ಸಂಸ್ಥೆ ಕೂಡ ಇದನ್ನು ಭೇದಿಸಲು ಯಶಸ್ವಿಯಾಗಿಲ್ಲ. ಅಷ್ಟರ ಮಟ್ಟಿಗೆ ದಂಧೆಕೋರರು ಅತ್ಯುನ್ನತ ತಂತ್ರಜ್ಞಾನ ಬಳಸುತ್ತಿದ್ದಾರೆ ಎನ್ನುತ್ತಾರೆ ಸಿಸಿಬಿ ಅಧಿಕಾರಿಯೊಬ್ಬರು.

ವರದಿ: ಎನ್.ಲಕ್ಷ್ಮಣ್, ಕನ್ನಡಪ್ರಭ
 

loader