ಆನ್ ಲೈನ್ ನಲ್ಲಿ 1 ಲಕ್ಷ ಜನರಿಗೆ ಟೋಪಿ ಹಾಕಿದ ಹಳ್ಳಿ ಹೈದ..!

online racket duped over 1 lakh people
Highlights

ಆರ್ ಬಿಐ ಗ್ರಾಹಕ ಸೇವಾ ಅಧಿಕಾರಿಗಳ ಸೋಗಿನಲ್ಲಿ ಆನ್ ಲೈನ್ ನಲ್ಲಿ ಮೋಸ ಮಾಡುತ್ತಿದ್ದ ಭಾರೀ ಜಾಲವನ್ನು ಜಾರ್ಖಂಡ್ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಂಚಕರ ಬೃಹತ್ ಜಾಲವನ್ನೇ ರಚಿಸಿ ದೇಶದ ಪ್ರಮುಖ ನಗರಗಳಲ್ಲಿ ಈ ತಂಡ ಕಾರ್ಯ ನಿರ್ವಹಿಸುತ್ತಿತ್ತು ಎಂದು ಹೇಳಲಾಗಿದೆ.

ರಾಂಚಿ [ಮೇ.25]: ಆರ್ ಬಿಐ ಗ್ರಾಹಕ ಸೇವಾ ಅಧಿಕಾರಿಗಳ ಸೋಗಿನಲ್ಲಿ ಆನ್ ಲೈನ್ ನಲ್ಲಿ ಮೋಸ ಮಾಡುತ್ತಿದ್ದ ಭಾರೀ ಜಾಲವನ್ನು ಜಾರ್ಖಂಡ್ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಂಚಕರ ಬೃಹತ್ ಜಾಲವನ್ನೇ ರಚಿಸಿ ದೇಶದ ಪ್ರಮುಖ ನಗರಗಳಲ್ಲಿ ಈ ತಂಡ ಕಾರ್ಯ ನಿರ್ವಹಿಸುತ್ತಿತ್ತು ಎಂದು ಹೇಳಲಾಗಿದೆ.

ಜಾರ್ಖಂಡ್ ನ ಕುಗ್ರಾಮವೊಂದರ ಯುವಕ ರಾಮ್ ಕುಮಾರ್ ಮಂಡಲ್ ಎಂಬಾತ ಸುಮಾರು 200 ಯುವಕರಿಗೆ ತರಬೇತಿ ನೀಡಿ, ಅವರನ್ನು ಆರ್ ಬಿಐ ಗ್ರಾಹಕ ಸೇವಾ ಅಧಿಕಾರಿಗಳನ್ನಾಗಿ ಪರಿವರ್ತಿಸಿದ್ದ. ಈತನಿಂದ ತರಬೇತಿ ಹೊಂದಿದ ಯುವಕರು ಮುಂಬೈ, ಬೆಂಗಳೂರು, ದೆಹಲಿ, ಕೋಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಜಾಲ ವಿಸ್ತರಿಸಿಕೊಂಡಿದ್ದರು.

ಆರ್ ಬಿಐ ಅಧಿಕಾರಿಗಳ ಸೊಗಿನಲ್ಲಿ ಈ ಯುವಕರು ಗ್ರಾಹರಿಂದ ಬ್ಯಾಂಕ್ ಮಾಹಿತಿ ಪಡೆದು ನಂತರ ಅದರಿಂದ ಹಣ ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಮಾತನ್ನು ನಂಬಿದ ದೆಹಲಿಯ ಆನಂದ್ ವಿಹಾರದ ಮಹಿಳೆಯೋರ್ವಳು ತಮ್ಮ ಓಟಿಪಿ ಕಳುಹಿಸಿ ಸುಮಾರು 1.9 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಇದುವರೆಗೂ ಈ ವಂಚಕರಿಂದ ಸುಮಾರು 1 ಲಕ್ಷ ಜನ ವಂಚನೆಗೊಳಗಾಗಿದ್ದಾರೆ.
ರಾಮ್ ಕುಮಾರ್ ನೇತೃತ್ವದ ಈ ಜಾಲ ಮಾವೋವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ ಎಂಬ ಆಘಾತಕರಿ ಮಾಹಿತಿ ಕೂಡ ಹೊರಬಿದ್ದಿದೆ. ಈ ವಂಚಕರ ಜಾಲ ಭೇಧಿಸಲು ನಿರ್ಧರಿಸಿದ ಪೊಲೀಸರು ಗ್ರಾಹಕರ ಸೊಗಿನಲ್ಲಿ ಈ ತಂಡವನ್ನು ಖೆಡ್ಡಾಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

loader