ಪಂಜಾಬ್ ನಲ್ಲಿ ಮತ್ತೊಂದು ಪಾಕಿಸ್ತಾನದ ಪಾರಿವಾಳ ಪತ್ತೆಯಾಗಿದೆ | ಛಾವಣಿ ಮೇಲೆ ಕುಳಿತಿದ್ದ ಈ ಪಾರಿವಾಳವನ್ನು ಹಿಡಿದ ಮಾಲೀಕ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ
ಅಜ್ನಾಲಾ, ಪಂಜಾಬ್ (ಅ.08): ಪಾಕಿಸ್ತಾನದಿಂದ ಬಂದಿದ್ದ ಪಾರಿವಾಳ ಅಕ್ಟೋಬರ್ 2 ರಂದು ಭಾರತದಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಪ್ರಧಾನಿ ಅವರನ್ನು ಕುರಿತ ಬರಹವಿದ್ದ ಕಾರಣ ಭಾರೀ ಸುದ್ದಿಯಾಗಿತ್ತು.
ಇದೀಗ ಪಂಜಾಬ್ ನಲ್ಲಿ ಮತ್ತೊಂದು ಪಾಕಿಸ್ತಾನದ ಪಾರಿವಾಳ ಪತ್ತೆಯಾಗಿದೆ. ಪಾರಿವಾಳದ ಗರಿಯ ಮೇಲೆ ಶೇಖ್ ಮೌಲಾ ಎಂದು ಬರೆಯಲಾಗಿದೆ.
ಪಂಜಾಬ್ ನ ಅಜ್ನಾಲಾದ ಅಂಗಡಿಯೊಂದರ ಛಾವಣಿ ಮೇಲೆ ಕುಳಿತಿದ್ದ ಈ ಪಾರಿವಾಳವನ್ನು ಹಿಡಿದ ಮಾಲೀಕ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.
ಈ ಭಾಗದಲ್ಲಿ ಪಕ್ಷಿಗಳ ಆಗಮನ ಮತ್ತು ವಲಸೆ ಸಾಮಾನ್ಯ. ಕೆಲವರು ಪಾರಿವಾಳಗಳನ್ನು ಹಾರಿ ಬಿಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ.
ಇದರ ಜತೆಗೆ ಇದೇ ತಿಂಗಳು ಕಳೆದ 3ನೇ ತಾರೀಖಿನಂದು ಕೂಡ ಬಲೂನು ಹಾಗೂ ಪಾರಿವಾಳದ ಜತೆ ಬೆದರಿಕೆ ಪತ್ರ ಬರೆದು ಕಳುಹಿಸಿದ್ದನ್ನು ಸ್ಮರಿಸಬಹುದು.
ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.
