Asianet Suvarna News Asianet Suvarna News

ಮುತ್ತಪ್ಪ ರೈ ಬೆನ್ನು ಬಿಡದ ‘ಆಯುಧ ಪೂಜೆ’ ಮತ್ತೊಂದು ಖಡಕ್ ದೂರು

ಆಯುಧ  ಪೂಜೆ ದಿನ ಶಸ್ತ್ರಾಸ್ತ್ರ ಪೂಜೆ ಮಾಡಿದ್ದ ಮುತ್ತಪ್ಪ ರೈ ಅವರನ್ನು ಒಂದೆಲ್ಲಾ ಒಂದು ಸಮಸ್ಯೆಗಳು ಸುತ್ತಿಕೊಳ್ಳುತ್ತಲೆ ಇವೆ. ಆಯುಧಕ್ಕೆ ಸಂಬಂಧಿಸಿ ಕೇವಲ ಅಂಗರಕ್ಷಕರು ಮತ್ತು ಸೆಕ್ಯೂರಿಟಿ ಏಜೆನ್ಸಿ ಮೇಲೆ ಮಾತ್ರ ದೂರು ದಾಖಲು ಮಾಡಲಾಗಿದೆ ಎಂದು ಆರೋಪಿಸಿ ಇದೀಗ ಮುತ್ತಪ್ಪ ರೈ ಅವರ ಮೇಲೂ ದೂರು ದಾಖಲಾಲಿಸಿದ್ದಾರೆ.

one more complaint against muthappa rai over arms worship
Author
Bengaluru, First Published Oct 25, 2018, 6:08 PM IST

ಬೆಂಗಳೂರು[ಅ.25]  ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ, ಮಾಜಿ ಡಾನ್ ಮುತ್ತಪ್ಪ ರೈ ಆಯುಧ ಪೂಜೆ ವಿಚಾರಕ್ಕೆ ಸಂಬಂಧಿಸಿ ಸ್ಟೇಶನ್ ಮೆಟ್ಟಿಲು ಏರಿ ಬಂದಿದ್ದರು. ಇದೀಗ ಮುತ್ತಪ್ಪ ರೈ ವಿರುದ್ದ ಡಿಜಿ ನೀಲಮಣಿ ರಾಜುಗೆ ದೂರು

ಡಿಜಿ ಜೊತೆಗೆ ಗೃಹಕಾರ್ಯದರ್ಶಿ ಹಾಗೂ ಮುಖ್ಯಕಾರ್ಯದರ್ಶಿಗೂ ದೂರು ನೀಡಲಾಗಿದೆ. ವಕೀಲರೊಬ್ಬರು ರೈ ವಿರುದ್ಧ ದೂರು ನೀಡಿದ್ದಾರೆ. ಕೇವಲ ಅಂಗರಕ್ಷಕರು ಮತ್ತು ಸೆಕ್ಯೂರೊಟಿ ಏಜೆನ್ಸಿ ಮೇಲೆ ಮಾತ್ರ ದೂರು ದಾಖಲು ಮಾಡಲಾಗಿದೆ. ಆದರೆ ರೈ ವಿರುದ್ಧ ಸಿಸಿಬಿ ಯಾವುದೆ ಎಫ್.ಐ.ಆರ್ ದಾಖಲು ಮಾಡಿಲ್ಲ. ಪ್ರಕರಣದಲ್ಲಿ ರೈ ಕಾನೂನು ಉಲ್ಲಂಘನೆ ಮಾಡಿರೋದು ಸ್ಪಷ್ಟವಾಗಿದೆ ಹಾಗಾಗಿ ವಿಚಾರಣೆ ನಡೆಸಬೇಕು ಎಂದು ಕೇಳಿಕೊಳ್ಳಲಾಗಿದೆ.

ಆಯುಧ ಪೂಜೆಯಂದು ಮುತ್ತಪ್ಪ ರೈಗೆ ಅಪರಿಚಿತ ತಂದ ಆಪತ್ತು: ಯಾರವರು?

ರೈ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ 3,7 ಹಾಗೂ ಐಪಿಸಿ 120(ಬಿ), 506 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಇನ್ನು ರೈ ಮೇಲೆ ಕೋಕಾ ಕಾಯ್ದೆನ್ನು ಹೇರಬೇಕೆಂದು ದೂರು ನೀಡಿರುವ ವಕೀಲರಾದ ಜಗದೀಶ್ ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios