ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿಂದು ನಡೆದ ಬಿಜೆಪಿ ಪರಿವರ್ತನಾ ಸಭೆಗೆ ಬಂದಿದ್ದ ಮಹಿಳೆಯರಿಗೆ ಮೊದಲು ತಲಾವಾರು ಟೋಕನ್ ನೀಡಿ ನಂತರ ಹಣ ಹಂಚಿದ ಪ್ರಸಂಗ ನಡೆದಿದೆ. ಪರಿವರ್ತನಾ ರ್ಯಾಲಿಯಲ್ಲಿ ಮಹಿಳಾ ಕಾರ್ಯಕರ್ತರಿಗೆ ಕೂಪನ್ ಹಂಚಲಾಗಿದೆ. ಒಂದು ಕೂಪನ್ ಒಂದು ಕೂಪನ್ ಪಡೆದರೆ ಒಂದು ಸೀರೆ ನೀಡುವ ಜೊತೆಗೆ ಹಣದ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು ಈ ಒಂದು ಅವಕಾಶಕ್ಕೆ ತಾ ಮುಂದು, ನಾ ಮುಂದು ಎಂದು ಮುಗಿಬಿದ್ದು, ಕೂಪನ್ ಪಡೆದರು.
ಹಾಸನ (ನ.07): ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿಂದು ನಡೆದ ಬಿಜೆಪಿ ಪರಿವರ್ತನಾ ಸಭೆಗೆ ಬಂದಿದ್ದ ಮಹಿಳೆಯರಿಗೆ ಮೊದಲು ತಲಾವಾರು ಟೋಕನ್ ನೀಡಿ ನಂತರ ಹಣ ಹಂಚಿದ ಪ್ರಸಂಗ ನಡೆದಿದೆ. ಪರಿವರ್ತನಾ ರ್ಯಾಲಿಯಲ್ಲಿ ಮಹಿಳಾ ಕಾರ್ಯಕರ್ತರಿಗೆ ಕೂಪನ್ ಹಂಚಲಾಗಿದೆ. ಒಂದು ಕೂಪನ್ ಒಂದು ಕೂಪನ್ ಪಡೆದರೆ ಒಂದು ಸೀರೆ ನೀಡುವ ಜೊತೆಗೆ ಹಣದ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು ಈ ಒಂದು ಅವಕಾಶಕ್ಕೆ ತಾ ಮುಂದು, ನಾ ಮುಂದು ಎಂದು ಮುಗಿಬಿದ್ದು, ಕೂಪನ್ ಪಡೆದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ,ಈಶ್ವರಪ್ಪ, ಆರ್. ಅಶೋಕ್, ಶೋಭಾ ಕರಂದ್ಲಾಜೆ ಮೊದಲಾದವರು ಭಾಗಿಯಾಗಿದ್ದ ಸಭೆಗೆ ಟಿಕೆಟ್ ಆಕಾಂಕ್ಷಿಗಳು ಪೈಪೋಟಿಗೆ ಬಿದ್ದು ಜನರನ್ನು ಅದರಲ್ಲೂ ಹೆಚ್ಚಾಗಿ ಮಹಿಳೆಯರನ್ನು ಕರೆತಂದಿದ್ದರು.
ಇವರಿಗೆ ತಲಾವಾರು 500, 1000 ಮತ್ತು 2 ಸಾವಿರದ ವರೆಗೂ ಹಣ ಕೊಟ್ಟು ಸಭೆಗೆ ಕರೆತರಲಾಗಿದೆ ಎಂಬ ಗುಸು ಗುಸು ಸಭೆಯ ತುಂಬೆಲ್ಲಾ ಕೇಳಿ ಬಂತು. ಅದಕ್ಕೂ ಮುನ್ನ ಯರ್ಯಾರು ಎಲ್ಲಿಂದ ಬಂದಿದ್ದಾರೆ ಎಂದು ಗುರುತಿಸಿ,ಮೊದಲು ಟೋಕನ್ ಕೊಟ್ಟು ನಂತರ ಹಣ ಹಂಚಲಾಯಿತು. ಹೀಗೆ ಟೋಕನ್ ಪಡೆದು ಬಂದವರು, ಯಾರು ಕೈ ಬಿಸಿ ಮಾಡಿದ್ದರೋ ಅವರ ಹೆಸರನ್ನು ರಾಜ್ಯ ನಾಯಕರು ಹೇಳುತ್ತಿದ್ದಂತೆಯೇ ಜೈ ಅಂತ ಘೋಷಣೆ ಕೂಗುತ್ತಿದ್ದರು.
