ಹಣ ನೀಡುವುದಾಗಿ ಹೇಳಿ ಆರೋಪಿ ಕುಮಾರ್'ನನ್ನು ದಯಾನಂದಸಾಗರ್ ಕಾಲೇಜು ಬಳಿ ಬರಲು ಹೇಳಿಸುತ್ತಾರೆ. ಆ ಜಾಗಕ್ಕೆ ಬಂದ ಕುಮಾರ್'ನನ್ನು ಶಶಿಧರ್ ಮತ್ತವರ ತಂಡ ರೆಡ್ ಹ್ಯಾಂಡಾಗಿ ಹಿಡಿಯುತ್ತದೆ.
ಬೆಂಗಳೂರು(ಏ. 10): ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಅವರಿಗೆ ಬ್ಲ್ಯಾಕ್'ಮೇಲ್ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸೆಕ್ಸ್ ಸಿಡಿ ಇದೆ ಎಂದು ಬ್ಲ್ಯಾಕ್'ಮೇಲ್ ಮಾಡಿ ಹಣ ಪೀಕಿಸಲು ಯತ್ನಿಸುತ್ತಿದ್ದ ಕುಮಾರ್'ನನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ರಕರ್ತನಾಗಿರುವ ಆರೋಪಿ ಕುಮಾರ್ ಮೂರು ವರ್ಷದಿಂದ ಆನಂದ್ ಗುರೂಜಿಯನ್ನು ಬ್ಲ್ಯಾಕ್'ಮೇಲ್ ಮಾಡುತ್ತಿದ್ದನಾದರೂ ಇತ್ತೀಚೆಗೆ ಒಂದೂವರೆ ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುತ್ತಾನೆ. ಹಣ ಕೊಡದಿದ್ದರೆ ಸೆಕ್ಸ್ ಸಿಡಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತೇನೆಂದು ಬೆದರಿಸುತ್ತಾನೆ. ಆಗ, ಗುರೂಜಿಯವರು ಹಿರಿಯ ಪೊಲೀಸ್ ಅಧಿಕಾರಿಗೆ ವಿಷಯ ತಿಳಿಸುತ್ತಾರೆ. ನಂತರ, ಬಸವನಗುಡಿ ಇನ್ಸ್'ಪೆಕ್ಟರ್ ಶಶಿಧರ್ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗುತ್ತದೆ. ಗುರೂಜಿಯವರ ವಾಹನ ಚಾಲಕರಾಗಿ ಶಶಿಧರ್ ಅಖಾಡಕ್ಕೆ ಇಳಿಯುತ್ತಾರೆ. ಹಣ ನೀಡುವುದಾಗಿ ಹೇಳಿ ಆರೋಪಿ ಕುಮಾರ್'ನನ್ನು ದಯಾನಂದಸಾಗರ್ ಕಾಲೇಜು ಬಳಿ ಬರಲು ಹೇಳಿಸುತ್ತಾರೆ. ಆ ಜಾಗಕ್ಕೆ ಬಂದ ಕುಮಾರ್'ನನ್ನು ಶಶಿಧರ್ ಮತ್ತವರ ತಂಡ ರೆಡ್ ಹ್ಯಾಂಡಾಗಿ ಹಿಡಿಯುತ್ತದೆ.
ಇದೇ ವೇಳೆ, ಸುವರ್ಣನ್ಯೂಸ್ ಜೊತೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
