ನಾವೇನು ಮಾಡಿದ್ದೇವೆ ಎಂದು ಗೊತ್ತಿಲ್ಲದಿದ್ದರೆ, ನೀವ್ಯಾಕೆ ಪ್ರಧಾನಿಯಾಗಿರಬೇಕು..? ಖರ್ಗೆ ಲೇವಡಿ

Once Again Mallikarjun Kharge Targets Narendra Modi
Highlights

ಕಲಬುರಗಿ ನಗರದ ಎನ್'ವ್ಹಿ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಸತ್ತರ್ ಸಾಲ್ ಮೇ ಕ್ಯಾರೇ ಏ ಕಾಂಗ್ರೆಸ್ ಲೋಗ್ ಅಂತಾ ಹೇಳಿದ್ದೆ ಹೇಳ್ತಾರೆ, ಕೇಳಿದ್ದೆ ಕೇಳ್ತಾರೆ. ನಾವು ಏನು ಮಾಡಿದ್ದೇವೆ ಅಂತಾ ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ನೀವ್ಯಾಕೇ ಪ್ರಧಾನಿಯಾಗಿರಬೇಕು ಎಂದು ಖರ್ಗೆ ಲೇವಡಿ ಮಾಡಿದ್ದಾರೆ.

ಕಲಬುರಗಿ(ಫೆ.12): ಮೋದಿ ವಿದೇಶದಲ್ಲಿ ಜೋರಾಗಿ ಭಾಷಣ ಮಾಡ್ತಾರೆ. ಸದನದಲ್ಲಿ ಮೌನವಾಗಿ ಕುಳಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಕಲಬುರಗಿ ನಗರದ ಎನ್'ವ್ಹಿ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಸತ್ತರ್ ಸಾಲ್ ಮೇ ಕ್ಯಾರೇ ಏ ಕಾಂಗ್ರೆಸ್ ಲೋಗ್ ಅಂತಾ ಹೇಳಿದ್ದೆ ಹೇಳ್ತಾರೆ, ಕೇಳಿದ್ದೆ ಕೇಳ್ತಾರೆ. ನಾವು ಏನು ಮಾಡಿದ್ದೇವೆ ಅಂತಾ ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ನೀವ್ಯಾಕೇ ಪ್ರಧಾನಿಯಾಗಿರಬೇಕು ಎಂದು ಖರ್ಗೆ ಲೇವಡಿ ಮಾಡಿದ್ದಾರೆ.

ಮೋದಿ ವಿದೇಶಕ್ಕೆ ಹೋದಾಗ ಕೂಡ ಕಾಂಗ್ರೆಸ್ ಏನ್ ಮಾಡಿದೆ ಅಂತಾ ಕೇಳ್ತಾರೆ. ಅಮೇರಿಕಾದಲ್ಲಿರುವ ಭಾರತೀಯ ಇಂಜಿನಿಯರ್ಸ್, ಡಾಕ್ಟರ್'ಗಳೆಲ್ಲರು ನಮ್ಮ ಕಾಲದಲ್ಲಿ ಓದಿ ಬೆಳೆದವರು. ಇಎಸ್‌ಐ ಮೆಡಿಕಲ್ ಹಬ್, ಸೇಂಟ್ರಲ್ ಯುನಿವರ್ಸಿಟಿ, ನಾಲ್ಕು ಮೆಡಿಕಲ್ ಕಾಲೇಜು, 371(ಜೆ) ಕಲಬುರಗಿ ಜಿಲ್ಲೆಗೆ ನೀಡಿದ್ದೇವೆ. ಇವೆಲ್ಲ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಇವೆಲ್ಲವನ್ನು ನೋಡೊಕೆ ಪ್ರಧಾನಿ ಮೋದಿ ಒಮ್ಮೆ ಬರಲಿ ಎಂದು ಖರ್ಗೆ ಸವಾಲು ಹಾಕಿದ್ದಾರೆ

loader