Asianet Suvarna News Asianet Suvarna News

ಅಯೋಧ್ಯೆಯಲ್ಲಿ ಮಂದಿರವೋ, ಮಸೀದಿಯೋ ಶುಕ್ರವಾರ ತಿಳಿಯುತ್ತೆ?

ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಲಿರುವ ಸುಪ್ರೀಂ! ನಮಾಜ್ ಗೆ ಮಸೀದಿ ಮುಖ್ಯವೋ ಅಲ್ಲವೋ ಎಂಬ ತೀರ್ಪು! ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕೊನೆಯ ತೀರ್ಪು! ಅ.2 ಕ್ಕೆ ನಿವೃತ್ತಿಯಾಗಲಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ! ಅಯೋಧ್ಯೆ ವಿವಾದ ಕುರಿತ ಭವಿಷ್ಯದ ತೀರ್ಪಿಗೆ ಪ್ರಭಾವ ಬೀರುತ್ತಾ? 

On Friday, Supreme Court Could Deliver A Verdict Crucial To Ayodhya
Author
Bengaluru, First Published Sep 25, 2018, 1:40 PM IST

ನವದೆಹಲಿ(ಸೆ.25): ಮಹತ್ವದ ಬೆಳವಣಿಗೆಯೊಂದರಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಶುಕ್ರವಾರ(ಸೆ.29) ಮಹತ್ವದ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಸ್ಲಿಮರು ನಮಾಜ್ ಮಾಡಲು ಮಸೀದಿಯೇ ಆಗಬೇಕೆ ಅಥವಾ ಎಲ್ಲಿ ಬೇಕಾದರೂ ನಮಾಜ್ ಮಾಡಬಹುದೇ ಎಂಬ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ. ಮಸೀದಿ ಇಸ್ಲಾಂ ಧರ್ಮದ ಬಹುಮುಖ್ಯ ಅಂಗ ಎಂಬುದರ  ಕುರಿತು ಚರ್ಚೆ ನಡೆಯಲಿದೆ.

ಈ ತೀರ್ಪು ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಭವಿಷ್ಯದ ತೀರ್ಪುಗಳಿಗೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದ ತೀರ್ಪು ಭಾರೀ ಮಹತ್ವ ಪಡೆದುಕೊಂಡಿದೆ.

ಇನ್ನೊಂದು ವಿಶೇಷವೆಂದರೆ ಮುಖ್ಯ ನ್ಯಾಯಮೂರ್ತಿ  ದೀಪಕ್ ಮಿಶ್ರಾ ಇದೇ (ಅ.2)ನಿವೃತ್ತಿ ಹೊಂದಲಿದ್ದು, ಅಂದು ಮಿಶ್ರಾ ಈಗಾಗಲೇ ತಮ್ಮ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಸಿದ್ದ 16 ಕೇಸಿನ ತೀರ್ಪು ಪ್ರಕಟಿಸಲಿದ್ದಾರೆ. 

ಮುಖ್ಯವಾಗಿ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ, ಉದ್ಯೋಗ ಬಡ್ತಿ ಮೀಸಲು, ಆಧಾರ್, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ, ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುವ ಸಂವಿಧಾನದ 497ನೇ ವಿಧಿ ರದ್ದು ಕೋರಿದ್ದ ಅರ್ಜಿ, ರಾಜ್ಯಗಳಿಗೂ ಆರ್‌ಟಿಐ ಕಾಯ್ದೆ ತಿದ್ದುಪಡಿ ಮಾಡಲು ಅವಕಾಶ, ಅಹಮದ್ ಪಟೇಲ್ ರಾಜ್ಯಸಭೆ ಚುನಾವಣೆ ಪ್ರಕರಣ, ರಾಘವೇಂದ್ರ ಸ್ವಾಮಿ ಮಠ ಮತ್ತು ಉತ್ತರಾಧಿ ಮಠ ನಡುವಿನ ಪ್ರಕರಣಗಳು ಕೂಡಾ ಸೇರಿವೆ.

ಪರಿಶುದ್ಧ ರಾಜಕೀಯಕ್ಕೆ ಇಂದು ಮುಹೂರ್ತ..?

Follow Us:
Download App:
  • android
  • ios