ಫ್ರಾನ್ಸ್'ನಲ್ಲಿ ನಡೆದ ಸರ್ಕಸ್ ಶೋ ಒಂದರಲ್ಲಿ ಎದೆ ನಡುಗಿಸುವ ಘಟನೆಯೊಂದು ನಡೆದಿದೆ. ಫ್ರಾನ್ಸ್'ನ ಡಲೆನ್ಸ್'ನಲ್ಲಿ ನಡೆದ ಸರ್ಕಸ್ ಶೋ ಒಂದರಲ್ಲಿ ಸಿಂಹವೊಂದು ತನ್ನ ಮಾಲಿಕನ ಮೇಲೆಯೇ ದಾಳಿ ನಡೆಸಿದ್ದಲ್ಲದೆ, ಆತನ ಕತ್ತನ್ನೇ ಹಿಡಿದಿಟ್ಟಿತ್ತು. ಈ ಭೀಕರ ದೃಶ್ಯ ಕಂಡ ಜನರು ಮೂಕ ಪ್ರೇಕ್ಷಕರಾಗಿದ್ದರು. ವರದಿಗಳನ್ವಯ ಸಿಂಹವನ್ನು ಪಳಗಿಸುತ್ತಿದ್ದ ಮಾಲಿಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಫ್ರಾನ್ಸ್(ಮೇ.10): ಫ್ರಾನ್ಸ್'ನಲ್ಲಿ ನಡೆದ ಸರ್ಕಸ್ ಶೋ ಒಂದರಲ್ಲಿ ಎದೆ ನಡುಗಿಸುವ ಘಟನೆಯೊಂದು ನಡೆದಿದೆ. ಫ್ರಾನ್ಸ್'ನ ಡಲೆನ್ಸ್'ನಲ್ಲಿ ನಡೆದ ಸರ್ಕಸ್ ಶೋ ಒಂದರಲ್ಲಿ ಸಿಂಹವೊಂದು ತನ್ನ ಮಾಲಿಕನ ಮೇಲೆಯೇ ದಾಳಿ ನಡೆಸಿದ್ದಲ್ಲದೆ, ಆತನ ಕತ್ತನ್ನೇ ಹಿಡಿದಿಟ್ಟಿತ್ತು. ಈ ಭೀಕರ ದೃಶ್ಯ ಕಂಡ ಜನರು ಮೂಕ ಪ್ರೇಕ್ಷಕರಾಗಿದ್ದರು. ವರದಿಗಳನ್ವಯ ಸಿಂಹವನ್ನು ಪಳಗಿಸುತ್ತಿದ್ದ ಮಾಲಿಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆ ಅಲವಡಿಸಿದ್ದ ಕ್ಯಾಮರಾಗಳಲ್ಲೂ ಸೆರೆಯಾಗಿದೆ. ಇನ್ನು ಪ್ರೇಕ್ಷಕನೊಬ್ಬ ಈ ಘಟನೆಯನ್ನು ಫೆಸ್'ಬುಕ್ ಲೈವ್ ಮೂಲಕ ಪ್ರಸಾರ ಮಾಡಿದ್ದು, 'ನನ್ನ ಮಗಳು ಈ ಘಟನೆಯಿಂದ ಹೆದರಿದ್ದು, ಇನ್ನೂ ಚೇತರಿಸಿಕೊಂಡಿಲ್ಲ' ಎಂದು ಬರೆದುಕೊಂಡಿದ್ದಾರೆ.
ಇನ್ನು ಘಟನೆಯ ಸಂದರ್ಭದಲ್ಲಿ ಭಯಬಿದ್ದ ಪ್ರೇಕ್ಷಕರು ಕಿರುಚಾಡುತ್ತಿರುವ ಶಬ್ಧ ವಿಡಿಯೋದಲ್ಲಿ ಕೇಳಿ ಬಂದಿದೆ. ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಂಹವನ್ನು ಪಳಗಿಸುತ್ತಿದ್ದ ಮಾಲಿಕ ಸಿಂಹವನ್ನು ರಿಂಗ್ ಮೂಲಕ ನಾಲ್ಕೂ ದಿಕ್ಕಿನಿಂದ ಎಳೆದಾಡುತ್ತಿದ್ದ ಎಂದು ತಿಳಿದು ಬಂದಿದೆ.
