ಬಹ್ರೇನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಮನಾಮಾ (ಜ.09): ಬಹ್ರೇನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಮವಾರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಸರ್ಕಾರ ಜನರಿಗೆ ಉದ್ಯೋಗ ಒದಗಿಸುವಲ್ಲಿ ವಿಫಲವಾಗಿದೆ.

ಉದ್ಯೋಗ ಸೃಷ್ಟಿ 8 ವರ್ಷದ ಕನಿಷ್ಠಕ್ಕೆ ಕುಸಿದಿದೆ. ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಚೀನಾ 2 ದಿನದಲ್ಲಿ ಸಾಧಿಸಿದ್ದನ್ನು ಭಾರತ 1 ವರ್ಷದಲ್ಲಿ ಸಾಧಿಸುತ್ತಿದೆ’ ಎಂದು ಟೀಕಿಸಿದರು. ‘ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದ್ದು, ಕೊಲೆಗಳು ನಡೆಯುತ್ತಿವೆ.

ಪತ್ರಕರ್ತರ ಹತ್ಯೆಗಳು ಸಂಭವಿಸುತ್ತಿವೆ. ಆಹಾರ ಸೇವನೆಗೂ ಸ್ವಾತಂತ್ರ್ಯ ಇಲ್ಲ’ ಎಂದರು. ‘ಇಷ್ಟೆಲ್ಲ ಆದರೂ ಪ್ರಧಾನಿ ಮಾತನಾಡುತ್ತಿಲ್ಲ. ನಮಗೆ ಮೌನ ಬೇಕಿಲ್ಲ. 2019ಕ್ಕೆ ಬಿಜೆಪಿಯನ್ನು ಸೋಲಿಸಲಿದ್ದೇವೆ’ ಎಂದು ಗುಡುಗಿದರು.