ಕಣಿವೆಗೆ ಪ್ರತ್ಯೇಕ ಪ್ರಧಾನಿ ಮತ್ತು ರಾಷ್ಟ್ರಪತಿ ನೇಮಕ ವಿಚಾರ| ಎನ್‌ಸಿ ನಾಯಕ, ಮಾಜಿ ಸಿಎಂ ಓಮರ್ ಅಬ್ದುಲ್ಲಾಗೆ ಗೌತಮ್ ಗಂಭೀರ್ ಕ್ಲಾಸ್| ನಾನು ಸಮುದ್ರದ ಮೇಲೆ ನಡೆಯಲು ಬಯುಸತ್ತೇನೆ ಎಂದು ಕಿಚಾಯಿಸಿದ ಗೌತಮ್| ಗೌತಮ್ ಟ್ವೀಟ್ ಗೆ ಖಡಕ್ ರಿಪ್ಲೈ ಕೊಟ್ಟ ಓಮರ್| ಐಪಿಎಲ್ ಕುರಿತು ಮಾತನಾಡುವಂತೆ ಗೌತಮ್ ಗೆ ಸಲಹೆ|
ನವದೆಹಲಿ(ಏ.02): ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಮತ್ತು ರಾಷ್ಟ್ರಪತಿ ನೇಮಿಸುವ ಪ್ರಸ್ತಾವನೆ ಮಾಡಿರುವ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಮತ್ತು ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವರಿಗೆ ಬಿಜೆಪಿ ನಾಯಕ ಗೌತಮ್ ಗಂಭೀರ್ ಟಾಂಗ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗೌತಮ್ ಗಂಭೀರ್, 'ಓಮರ್ ಅಬ್ದುಲ್ಲಾ ಕಣಿವೆಗೆ ಪ್ರತ್ಯೇಕ ಪ್ರಧಾನಿ ಮತ್ತು ರಾಷ್ಟ್ರಪತಿ ಬಯಸಿದರೆ ನಾನು ಸಮುದ್ರದಲ್ಲಿ ನಡೆಯಲು ಬಯಸುತ್ತೇನೆ..' ಎಂದು ಕಿಚಾಯಿಸಿದ್ದರು.
ಗಂಭೀರ್ ಟ್ವೀಟ್ ಗೆ ಅಷ್ಟೇ ಖಡಕ್ ಆಗಿ ಪ್ರತ್ಯುತ್ತರ ನೀಡಿರುವ ಓಮರ್ ಅಬ್ದುಲ್ಲಾ, 'ನನಗೆ ಕ್ರಿಕೆಟ್ ಕುರಿತು ಹೆಚ್ಚಿನ ಜ್ಞಾನವಿಲ್ಲ ಹೀಗಾಗಿ ನಾನು ಕ್ರಿಕೆಟ್ ಆಡಲ್ಲ. ಅದರಂತೆ ಗೌತಮ್ ಗಂಭೀರ್ ಅವರಿಗೆ ಕಾಶ್ಮೀರದ ಇತಿಹಾಸ ಗೊತ್ತಿಲ್ಲ, ಹೀಗಾಗಿ ಅವರು ಈ ವಿಷಯದ ಕುರಿತು ತಲೆ ಕೆಡಿಸಿಕೊಳ್ಳುವುದು ಬಿಟ್ಟು ಐಪಿಎಲ್ ಕುರಿತು ಟ್ವೀಟ್ ಮಾಡುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.
