'ಈ ಭಾಗದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ಇರುವ ಕಾರಣ ಸುಸಜ್ಜಿತ ಗರಡಿ ಮನೆ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ'- ಮುಖ್ಯಮಂತ್ರಿ ಸಿದ್ದರಾಮಯ್ಯ

ಧಾರವಾಡ(ಫೆ.03): ಇನ್ಮುಂದೆ ಪ್ರತಿ ಎರಡು ವರ್ಷಗಳಿಗೊಮ್ಮೆ ರಾಜ್ಯಮಟ್ಟದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯ ಒಲಿಂಪಿಕ್ಸ್‌'ಗೆ ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದ ಅವರು, ಜಾಗತಿಕ ಮಟ್ಟದ ಒಲಿಂಪಿಕ್ ಕ್ರೀಡೆಯಲ್ಲಿ ಚಿನ್ನ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ₹ 5 ಕೋಟಿ, ಬೆಳ್ಳಿ ಗೆದ್ದವರಿಗೆ ₹ 3 ಕೋಟಿ ಹಾಗೂ ಕಂಚು ಪಡೆದವರಿಗೆ ₹ 2 ಕೋಟಿ ಬಹುಮಾನವನ್ನು ಈಗಾಗಲೇ ಘೋಷಿಸಲಾಗಿದೆ. ಅಂತೆಯೇ ಇಲ್ಲಿ ಚಿನ್ನ ಗೆದ್ದವರಿಗೆ ಸರ್ಕಾರಿ ಪ್ರಥಮ ದರ್ಜೆ ನೌಕರಿ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.

ಇನ್ನು, ಹಲವು ವರ್ಷಗಳ ಬೇಡಿಕೆಯಂತೆ ಧಾರವಾಡದಲ್ಲಿ ಕ್ರೀಡಾ ಸಮುಚ್ಛಯ (ಸ್ಪೋಟ್ಸ್ ಕಾಂಪ್ಲೆಕ್ಸ್)ಕ್ಕೆ ಅನುದಾನ ಹಾಗೂ ಈ ಭಾಗದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ಇರುವ ಕಾರಣ ಸುಸಜ್ಜಿತ ಗರಡಿ ಮನೆ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.