ಬ್ಯಾನ್ ಆದ 500 ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡುವುದಿಲ್ಲ ಅಂತಾ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಳೇ ನೋಟುಗಳ ಠೇವಣಿಗೆ ಮತ್ತೊಂದು ಅವಕಾಶ ಕೊಟ್ಟರೆ, ನೋಟು ಅಮಾನ್ಯದ ಉದ್ದೇಶಕ್ಕೇ ಸೋಲಾಗುತ್ತದೆ. ಅಲ್ಲದೆ,ಕಪ್ಪುಹಣವನ್ನು ನಿರ್ಮೂಲನೆ ಮಾಡುವ ಉದ್ದೇಶವೂ ಈಡೇರುವುದಿಲ್ಲ ಎಂದು ಅಫಿಡವಿಟ್‌'ನಲ್ಲಿ ಸರ್ಕಾರ ತಿಳಿಸಿದೆ.
ಬೆಂಗಳೂರು(ಜು.18): ಬ್ಯಾನ್ ಆದ 500 ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡುವುದಿಲ್ಲ ಅಂತಾ ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಳೇ ನೋಟುಗಳ ಠೇವಣಿಗೆ ಮತ್ತೊಂದು ಅವಕಾಶ ಕೊಟ್ಟರೆ, ನೋಟು ಅಮಾನ್ಯದ ಉದ್ದೇಶಕ್ಕೇ ಸೋಲಾಗುತ್ತದೆ. ಅಲ್ಲದೆ,ಕಪ್ಪುಹಣವನ್ನು ನಿರ್ಮೂಲನೆ ಮಾಡುವ ಉದ್ದೇಶವೂ ಈಡೇರುವುದಿಲ್ಲ ಎಂದು ಅಫಿಡವಿಟ್'ನಲ್ಲಿ ಸರ್ಕಾರ ತಿಳಿಸಿದೆ.
ಹಳೇ ನೋಟುಗಳ ವಿನಿಮಯಕ್ಕೆ ಕಡೆಯ ಹಾಗೂ ಇನ್ನೊಂದು ಅವಕಾಶ ನೀಡಲು ಸಾಧ್ಯವೇ ಎಂದು ಪರಿಶೀಲಿಸಿ ಎಂದು ಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಈ ಬಗ್ಗೆ ಹೇಳಿಕೆ ನೀಡಿರುವ ಸರ್ಕಾರಿ ವಕೀಲರು. ಈ ಹಿಂದೆ ಪೆಟ್ರೋಲ್ ಬಂಕ್ ಗಳಲ್ಲಿ ಟಿಕೆಟ್ ಬುಕ್ ಮಾಡಲು ಹಳೆಯ ನೋಟು ಬಳಸಲು ಅವಕಾಶ ನೀಡಲಾಗಿತ್ತು. ಆದರೆ ಆಗ ವ್ಯಾಪಕ ದುರ್ಬಳಕೆ ನಡೆಯಿತು. ಕಪ್ಪು ಹಣ ಬಿಳಿ ಮಾಡುವ ದಂಧೆ ನಡೆದವು. ಪುನಃ ಚಲಾವಣೆಗೆ ಅವಕಾಶ ನೀಡಿದರೆ, ಈ ಸಲವು ಕಾಳದಂಧೆಕೋರರಿಗೆ ನೆರವಾಗಬಹುದು. ಆಗ ಇಡೀ ಆಶಯವೇ ಭಂಗವಾಗುತ್ತದೆ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿದರು.
