ಗುರುವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಬಹುದು, ಇನ್ನು ಮುಂದೆ ಬದಲಾಯಿಸಿಕೊಡುವುದಿಲ್ಲ ಎಂದು ತಿಳಿಸಿತ್ತು. ಅಲ್ಲದೇ ಆರ್‌ಬಿಐ ನೋಟುಗಳನ್ನು ಸ್ವೀಕರಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದ ಹಳೆಯ ನೋಟುಗಳನ್ನು ಇನ್ನೂ ಬದಲಾಯಿಸಿಕೊಳ್ಳದ ಲಕ್ಷಾಂತರ ಮಂದಿ ಆತಂಕ ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಶುಕ್ರವಾರ ಆರ್‌ಬಿಐ ಪ್ರಕಟಣ ನೀಡಿde.

ನವದೆಹಲಿ(ನ.26): ನಿಮ್ಮ ಹಳೆಯ ₹೫೦೦ ಮತ್ತು ₹೧೦೦೦ ನೋಟುಗಳನ್ನು ಬ್ಯಾಂಕುಗಳು ಬದಲಾಯಿಸಿ ಕೊಡದಿರಬಹುದು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಹಳೆಯ ನೋಟುಗಳನ್ನು ಬದಲಾಯಿಸಿಕೊಡಲಿದೆ.

ಗುರುವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಬಹುದು, ಇನ್ನು ಮುಂದೆ ಬದಲಾಯಿಸಿಕೊಡುವುದಿಲ್ಲ ಎಂದು ತಿಳಿಸಿತ್ತು. ಅಲ್ಲದೇ ಆರ್‌ಬಿಐ ನೋಟುಗಳನ್ನು ಸ್ವೀಕರಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದ ಹಳೆಯ ನೋಟುಗಳನ್ನು ಇನ್ನೂ ಬದಲಾಯಿಸಿಕೊಳ್ಳದ ಲಕ್ಷಾಂತರ ಮಂದಿ ಆತಂಕ ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಆರ್‌ಬಿಐ ಪ್ರಕಟಣ ನೀಡಿ, ತನ್ನ ಪ್ರಾದೇಶಿಕ ಕಚೇರಿಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.

ಇದುವರೆಗೆ ನಿಗದಿ ಮಾಡಿರುವ ಮಿತಿಗನುಸಾರವಾಗಿ ಹಳೆಯ ನೋಟು ಬದಲಾಯಿಸಿಕೊಡಲಾಗುತ್ತದೆ ಎಂದೂ ತಿಳಿಸಿದೆ.

ಆರ್‌ಬಿಐ ಕೌಂಟರ್‌ಗಳಲ್ಲಿ ಗುರುತಿನ ಪತ್ರ ನೀಡಿ ನಿತ್ಯ ೨೦೦೦ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಬೇರೆ ಯಾವ ಬ್ಯಾಂಕುಗಳಲ್ಲೂ ಬದಲಾವಣೆ ಸೌಲಭ್ಯ ಇಲ್ಲ ಎಂದೂ ಸ್ಪಷ್ಟಪಡಿಸಿದೆ.