ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ಡಿ.27): ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವದಾದ್ಯಂತ ಚಿಮಣಿ ಮೂಲಕ ಬಿಳಿ ಗಡ್ಡದ ಮನುಷ್ಯನೋರ್ವ ಮನೆಗೆ ಬಂದು ಹಣವನ್ನು ಇರಿಸಿಹೋದರೆ ಭಾರತದಲ್ಲಿ ಪರಿಸ್ಥಿತಿ ಬೇರೆಯಾಗಿದೆ.

ಬಿಳಿ ಗಡ್ಡದ ವಯಸ್ಸಾದ ಮನುಷ್ಯನೋರ್ವ ನಿಮ್ಮ ಮನೆಗೆ ಟಿವಿಗಳ ಮೂಲಕ ಆಗಮಿಸುತ್ತಾರೆ.ನಿಮ್ಮ ಬಳಿ ಇರುವ ಹಣವನ್ನೆಲ್ಲಾ ದೋಚಿಕೊಂಡು ಹೋಗುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಜಾರಿಗೆ ತಂದ ಹೊಸ ರೀತಿಯಾದ ಸರಕು ಮತ್ತು ಸೇವಾ ತೆರಿಗೆ ಹಾಗೂ ನೋಟು ಅಮಾನ್ಯೀಕರಣವನ್ನು ಗುರಿಯಾಗಿಸಿಕೊಂಡು ಇಂತಹ ಟ್ವೀಟ್ ಮಾಡಿದ್ದಾರೆ. ನಿಮ್ಮ ಲಾಕರ್, ಪಾಕೆಟ್ ಎಲ್ಲಾ ಕಡೆ ಇರುವ ಹಣವನ್ನೂ ಕೂಡ ದೋಚುತ್ತಾರೆ ಎಂದಿದ್ದಾರೆ.