ಶತಾಯುಷಿ ಅಜ್ಜಿಯ ನಾಲ್ಕು ವರ್ಷದ ವನವಾಸ ಅಂತ್ಯವಾಗಿದೆ. ಸ್ವಂತ ಸೂರು ಕಳೆದುಕೊಂಡು ಪರದಾಡುತ್ತಿದ್ದ ಅಜ್ಜಿಗೆ ಕೊನೆಗೂ ಜಿಲ್ಲಾಡಳಿತ ಸ್ಪಂದಿಸಿದೆ. ಅಜ್ಜಿ ಮೊಮ್ಮಗಳಿಗೆ ಸೂರು ಸಿಕ್ಕಿದ್ದು, ಇಬ್ಬರೂ ಈಗ ಸಂಭ್ರಮದಲ್ಲಿದ್ದಾರೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್ .
ಗದಗ(ಜ.27): ಶತಾಯುಷಿ ಅಜ್ಜಿಯ ನಾಲ್ಕು ವರ್ಷದ ವನವಾಸ ಅಂತ್ಯವಾಗಿದೆ. ಸ್ವಂತ ಸೂರು ಕಳೆದುಕೊಂಡು ಪರದಾಡುತ್ತಿದ್ದ ಅಜ್ಜಿಗೆ ಕೊನೆಗೂ ಜಿಲ್ಲಾಡಳಿತ ಸ್ಪಂದಿಸಿದೆ. ಅಜ್ಜಿ ಮೊಮ್ಮಗಳಿಗೆ ಸೂರು ಸಿಕ್ಕಿದ್ದು, ಇಬ್ಬರೂ ಈಗ ಸಂಭ್ರಮದಲ್ಲಿದ್ದಾರೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್ .
ಬರೊಬ್ಬರಿ 105 ವರ್ಷದ ಅಜ್ಜಿ ಸ್ವಂತ ಸೂರು ಕಳೆದುಕೊಂಡು ನಾಲ್ಕು ವರ್ಷ ಪರದಾಡಿದ್ದರು. ಆದರೆ ಈಗ ಆ ಅಜ್ಜಿಯ ನಾಲ್ಕು ವರ್ಷದ ವನವಾಸ ಅಂತ್ಯವಾಗಿದೆ. ಗದಗದ ಗಂಗಿಮಡಿ ನಿವಾಸಿ ಶತಾಯಿಷಿ ಅಜ್ಜಿ ಜೈ ತುನಬಿಗೆ ಅಕ್ರಮವಾಗಿ ಆಶ್ರಯ ಮನೆ ಪಡೆದ ಸೈಯದ್ ಬದಾಮಿಯಿಂದ ಪೊಲೀಸರು ಮನೆ ಕೊಡಿಸಿದ್ದಾರೆ.
ಮೊನ್ನೆಯಷ್ಟೇ ಸುವರ್ಣನ್ಯೂಸ್'ನಲ್ಲಿ ಅಜ್ಜಿಯ ಬದುಕಿನ ಬವಣೆ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೊನೆಗೂ ಅಜ್ಜಿಯ ನೆಮ್ಮದಿಗೆ ಕಾರಣವಾಗಿದೆ. ನಿನ್ನೆ ಸಂಜೆ ಗದಗ ಗ್ರಾಮೀಣ ಠಾಣೆಯ ಸಿಪಿಐ ಸೋಮಶೇಖರ್ ಮನೆಯ ಬೀಗ ಮುರಿದು ಅಜ್ಜಿಗೆ ಮನೆ ಕೊಡಿಸಿದ್ದಾರೆ. ಇದರಿಂದ ಅಜ್ಜಿ ಜೈತುನಬಿ ಫುಲ್ ಖುಷ್ ಆಗಿದ್ದಾರೆ.
ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಇವರಿಗೆ ಅವರ ಸ್ವಂತ ಮನೆಯನ್ನು ಕೊಡಿಸಿದೆ. ತಮಗೆ ಮನೆ ಕೊಡಿಸಲು ನೆರವಾದವರಿಗೆ ಅಜ್ಜಿಯ ಮೊಮ್ಮಗಳು ಕೃತಜ್ಞತೆ ಸಲ್ಲಿಸಿದ್ದಾಳೆ. ನಾಲ್ಕು ವರ್ಷದಿಂದ ಮರೆಯಾದ ಮಂದಹಾಸ ಇಂದು ಅಜ್ಜಿಯ ಮುಖದಲ್ಲಿ ಮೂಡಿದೆ. ಅಜ್ಜಿ, ಮೊಮ್ಮಗಳ ಈ ಸಂತಸ ಕಂಡು ಓಣಿಯ ಮಂದಿಯಲ್ಲಿ ಈ ಬಡಜೀವಗಳ ಸಂಭ್ರಮ ಹೀಗೆ ಇರಲಿ ಅಂತ ಹರಿಸಿದ್ರು.
