ಅಹಮದಾಬಾದ್: ಸಲಿಂಗಕಾಮ ತಪ್ಪಲ್ಲ ಎಂಬ ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ, ಸಲಿಂಗಕಾಮಿಗಳಿಗೆ ಬೃಹತ್ ವೃದ್ಧಾಶ್ರಮ ಸ್ಥಾಪಿಸಲು ಗುಜರಾತ್‌ನ ರಾಜಕುಟುಂಬ ಸದಸ್ಯ ಮಾನವೇಂದ್ರ ಸಿಂಗ್ ಗೋಹಿಲ್ ಪ್ರಕಟಿಸಿದ್ದಾರೆ. 

ಸಲಿಂಗಕಾಮ ತಪ್ಪಲ್ಲ ಎಂಬ ತೀರ್ಪಿನ ಹಿನ್ನೆಲೆಯಲ್ಲಿ ಹಲವು ವೃದ್ಧರು ತಮ್ಮ ಲೈಂಗಿಕ ಬಯಕೆಯ ರೀತಿ ಯನ್ನು ಬಹಿರಂಗವಾಗಿ ಪ್ರಕಟಿಸಬಹುದು.

ಇದರಿಂದ ಅವರನ್ನು ಮನೆಯಿಂದ ಹೊರಹಾಕುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಇಂಥವರಿಗಾಗಿ ವೃದ್ದಾಶ್ರಮ ಸ್ಥಾಪಿಸಲು 15 ಎಕರೆ ಜಾಗ ನೀಡುವುದಾಗಿ ಸ್ವತಃ ಸಲಿಂಗಿಯಾಗಿರುವ ಗೋಹಿಲ್ ಪ್ರಕಟಿಸಿದ್ದಾರೆ. 

ಈ ವೃದ್ಧಾಶ್ರಮದಲ್ಲಿ 50 ಮನೆಗಳನ್ನು ನಿರ್ಮಿಸಿ, ಅದರಲ್ಲಿ ವೃದ್ಧ ಸಲಿಂಗಿಗಳು ನೆಮ್ಮದಿಯಿಂದ ಇರಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.