ಓಲಾ – ಉಬರ್ ಚಾಲಕರ ಪ್ರತಿಭಟನೆ ಆರಂಭ

Ola Uber drivers strike starts today
Highlights

ವಿವಿಧ ಮಹಾನಗರಗಳಲ್ಲಿ ಉಬರ್‌, ಓಲಾ ಚಾಲಕರು ಇಂದಿನಿಂದ ಅನಿರ್ಧಿಷ್ಠಾವಧಿ ಮುಷ್ಕರ ಕೈಗೊಳ್ಳಲು ನಿರ್ಧಾರ ಮಾಡಿದ್ದು, ಮುಂಬೈನಲ್ಲಿ ಈಗಾಗಲೇ ಪ್ರತಿಭಟನೆ ಆರಂಭಿಸಿದ್ದಾರೆ.

ಮುಂಬೈ: ವಿವಿಧ ಮಹಾನಗರಗಳಲ್ಲಿ ಉಬರ್‌, ಓಲಾ ಚಾಲಕರು ಇಂದಿನಿಂದ ಅನಿರ್ಧಿಷ್ಠಾವಧಿ ಮುಷ್ಕರ ಕೈಗೊಳ್ಳಲು ನಿರ್ಧಾರ ಮಾಡಿದ್ದು, ಮುಂಬೈನಲ್ಲಿ ಈಗಾಗಲೇ ಪ್ರತಿಭಟನೆ ಆರಂಭಿಸಿದ್ದಾರೆ. ನಗರದಲ್ಲಿ ಸುಮಾರು 30ಸಾವಿರಕ್ಕೂ ಅಧಿಕ ಕ್ಯಾಬ್’ಗಳಿದ್ದು, ಅನೇಕ ಪ್ರಯಾಣಿಕರು ಈ ನಿಟ್ಟಿನಲ್ಲಿ ಸಮಸ್ಯೆ ಎದುರಿಸಿದ್ದಾರೆ ಎನ್ನಲಾಗಿದೆ.

ಈ ಪ್ರತಿಭಟನೆಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಬೆಂಬಲ ನೀಡಿದ್ದು, ಇದರ ಟ್ರಾನ್ಸ್’ಪೋರ್ಟ್ ವಿಂಗ್ ಪ್ರತಿಭಟನೆ ಆರಂಭ ಮಾಡಿದೆ ಎನ್ನಲಾಗಿದೆ. ಈ ಪ್ರತಿಭಟನೆಗೆ ಈಗಾಗಲೇ ಸಾವಿರಕ್ಕೂ ಅಧಿಕ ಕ್ಯಾಬ್ ಡ್ರೈವರ್’ಗಳು ಬೆಂಬಲ ನೀಡಿದ್ದಾರೆ ಎಂದು ಎಂಎನ್’ಎಸ್ ಟ್ರಾನ್ಸ್’ಪೋರ್ಟ್ ವಿಂಗ್  ಅಧ್ಯಕ್ಷರಾದ ಸಂಜಯ್ ನಾಯ್ಕ್ ಹೇಳಿದ್ದಾರೆ. ಮುಂಬೈನಲ್ಲಿ ಆರಂಭವಾದ ಈ ಪ್ರತಿಭಟನೆಯಿಂದ ಈಗಾಗಲೇ ಕ್ಯಾಬ್’ನ್ನು ಅವಲಂಭಿಸಿದ್ದ ಅನೇಕ ಪ್ರಯಾಣಿಕರು ಕೂಡ ಸಮಸ್ಯೆ ಎದುರಿಸಿದ್ದಾರೆ.

ಇಂದು ತಮ್ಮ ವೆಚ್ಚವನ್ನೂ ಭರಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಆಪಾದಿಸಿ ವಾಹನ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ಎರಡೂ ಕಂಪನಿಗಳು ತಮಗೆ ಮಾಸಿಕ 1.5 ಲಕ್ಷ ರು. ಆದಾಯದ ಭರವಸೆ ನೀಡಿದ್ದರು. ಇದನ್ನು ನಂಬಿ ನಾವು ಕನಿಷ್ಠ 5-7 ಲಕ್ಷ ರು. ಬಂಡವಾಳ ಹೂಡಿ ವಾಹನ ಖರೀದಿ ಮಾಡಿದ್ದೆವು. ಆದರೆ ಇದೀಗ ಕಂಪನಿಗಳು ಭರವಸೆ ನೀಡಿದಷ್ಟು ಆದಾಯ ನೀಡದ ಕಾರಣ ತಾವು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಎಂದು ಚಾಲಕರು ದೂರಿದ್ದಾರೆ.

loader