ಸೇವೆ ಪ್ರಸ್ತುತ ಬೆಂಗಳೂರು, ದೆಹಲಿ, ಮುಂಬೈನಲ್ಲಿ ಲಭ್ಯವಿದ್ದು, ನಂತರದ ದಿನಗಳಲ್ಲಿ ಇತರ ನಗರಗಳಲ್ಲೂ ವಿಸ್ತರಿಸಲಿದೆ
ಕೇವಲ 250 ರೂ.ಗಳಿಗೆ ಬಿಎಂ'ಡಬ್ಲ್ಯು ಕಾರು. ಇದೇನು ನಮಗೆ ಹೂ ಮುಡಿಸುತ್ತಿದ್ದೀರಾ ಓದುಗರು ಕೇಳಬಹುದು. ಆದರೆ ಇದು ಖರೀದಿಗಲ್ಲ. ಓಡಾಲಿಕ್ಕೆ. ಆನ್'ಲೈನ್ ಕ್ಯಾಬ್ ಸೇವಾ ಕಂಪನಿ ಓಲಾ. ಕೇವಲ 250 ರೂ.ಗಳಿಗೆ ಬಿಎಂ'ಡಬ್ಲ್ಯು ಕಾರಿನ ಸೇವೆ ಒದಗಿಸಿದೆ.
ಓಲಾದಲ್ಲಿ 250 ರೂ.ಗಳ ಸೇವೆಯಲ್ಲಿ ಪ್ರತಿ ಕಿ.ಮೀಗೆ 20 ರಿಂದ 22 ರೂ. ನೀಡಬೇಕು. ಓಲಾ ಆ್ಯಪ್'ನಲ್ಲಿ 'ಲಕ್ಸ್' ಎಂಬ ಆಯ್ಕೆ ಮಾಡಿಕೊಂಡರೆ ಈ ಸೇವೆ ಲಭ್ಯವಾಗಲಿದೆ. ಈ ಸೇವೆ ಪ್ರಸ್ತುತ ಬೆಂಗಳೂರು, ದೆಹಲಿ, ಮುಂಬೈನಲ್ಲಿ ಲಭ್ಯವಿದ್ದು, ನಂತರದ ದಿನಗಳಲ್ಲಿ ಇತರ ನಗರಗಳಲ್ಲೂ ವಿಸ್ತರಿಸಲು ಓಲಾ ನಿರ್ಧರಿಸಿದೆ.
Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
