ಹೊರವಲಯದ ಎನ್ನೋರ್ ನ ಕರಾವಳಿ ತೀರದಲ್ಲಿ ಭಾರೀ ಪ್ರಮಾಣದ ಆಯಿಲ್ ನ್ನು ಸಮುದ್ರ ಪಾಲು ಮಾಡಲಾಗಿದೆ.
ಚೆನ್ನೈ (ಫೆ.01): ಹೊರವಲಯದ ಎನ್ನೋರ್ ನ ಕರಾವಳಿ ತೀರದಲ್ಲಿ ಭಾರೀ ಪ್ರಮಾಣದ ಆಯಿಲ್ ನ್ನು ಸಮುದ್ರ ಪಾಲು ಮಾಡಲಾಗಿದೆ.
ಆಯಿಲ್ನನ್ನು ಬೋಟ್ ಮೂಲಕ ಸಾಗಿಸಲಾಗುತ್ತಿತ್ತು. ಆಗ ಬೋಟ್ ಬಿರುಕು ಬಿಟ್ಟ ಪರಿಣಾಮ ಸಮುದ್ರ, ಮರೀನಾ ಬೀಚ್ ಸೇರಿದಂತೆ ಕರಾವಳಿ ಸಮುದ್ರದ ಸರಿಸುಮಾರು 25 ಕಿಲೋ ಮೀಟರ್ ಗಳಷ್ಟು ನೀರು ಆಯಿಲ್ ಮಯವಾಗಿದೆ. ವಿಷಯ ತಿಳಿದ ಮಾಲಿನ್ಯ ನಿಯಂತ್ರಣ ಇಲಾಖೆ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಪಂಪ್ ಗಳ ಮೂಲಕ ಆಯಿಲ್ ಸಂಸ್ಕರಣೆಯನ್ನ ಮುಂದುವರೆಸಿದ್ದಾರೆ. ಆದರೆ ಆಯಿಲ್ ಸಮುದ್ರ ಸೇರಿರುವ ಪರಿಣಾಮ ಈಗಾಗಲೇ ಸುತ್ತಮುತ್ತಲಿನ ಪ್ರದೇಶಕ್ಕೆ ಭಾರೀ ಪ್ರಮಾಣದ ತೊಂದರೆಯನ್ನುಂಟು ಮಾಡಿದೆ.
ಅಷ್ಟೇ ಅಲ್ಲದೇ ಜಲಚರಗಳಿಗೂ ತೊಂದರೆಯಾಗಿದ್ದು, ಮೀನುಗಾರೂ ಇದರಿಂದ ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮೀನು ಹಿಡಿಯಲು ಬಲೆ ಬೀಸಿದ್ರೆ, ಮೀನಿನ ಬದಲು ಬರೀ ಆಯಿಲ್ಲೇ ಬಲೆಯನ್ನು ಆವರಿಸುತ್ತೆ. ಇದ್ರಿಂದ ನಾವು ಮೀನು ಹಿಡಿಯಲು ಕೂಡ ಸಾಧ್ಯವಾಗ್ತಿಲ್ಲ ಅಂತಾರೆ ಮೀನುಗಾರರು.
