ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಅಡಳಿತ ಯಂತ್ರ ಚುರುಕುಗೊಂಡು ಗ್ರಾಮದಲ್ಲಿ ಬೋರ್'ವೆಲ್ ಕೊರೆಸಿ ನೀರು ನೀಡಲು ಮುಂದಾಗಿದೆ.

ಶಿವಮೊಗ್ಗ (ಮಾ.19): ಶಿವಮೊಗ್ಗ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಲಕ್ಕಿನಕೊಪ್ಪ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತ ಅಡಳಿತ ಯಂತ್ರ ಚುರುಕುಗೊಂಡು ಗ್ರಾಮದಲ್ಲಿ ಬೋರ್'ವೆಲ್ ಕೊರೆಸಿ ನೀರು ನೀಡಲು ಮುಂದಾಗಿದೆ.

ಅದರೆ 2 ಬೋರ್'ವೆಲ್'ಗಳನ್ನು ಕೊರೆಯಿಸಿದರೂ ನೀರು ಬರಲಿಲ್ಲ. ಆದರೂ ಪ್ರಯತ್ನ ಬಿಡದ ಅಧಿಕಾರಿಗಳು ಗ್ರಾಮದ ಕೆರೆಯಂಗಳದಲ್ಲಿ ಮೂರನೇ ಬೋರ್'ವೊಂದನ್ನು ಕೊರೆಯಿಸುತ್ತಿದ್ದಂತೆ ಕೇವಲ 270 ಅಡಿ ಆಳದಲ್ಲಿ ನೀರು ಸಿಕ್ಕಿತು.

ಈ ಮೂಲಕ ಬಾಯಾರಿದ ಜನ - ಜಾನುವಾರುಗಳ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇದಕ್ಕೆಲ್ಲ ಕಾರಣವಾದ ಸುವರ್ಣನ್ಯೂಸ್'ನ ಪ್ರಯತ್ನಕ್ಕೆ ಗ್ರಾಮಸ್ಥರು ಹೃದಯತುಂಬಿ ಧನ್ಯವಾದಗಳನ್ನು ಅರ್ಪಿಸಿದರು.