ಜಿಲ್ಲೆಗೆ ಸೇರಿದ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ಸಾಮಾನ್ಯ ಸಭೆ ನಡೆಸದೆ ನಡಾವಳಿ ಪುಸ್ತಕದಲ್ಲಿ ತಮಗೆ ಬೇಕಾದ ಯೋಜನೆಗಳಿಗೆ ಸಹಿ ಹಾಕಿಸಿಕೊಂಡು ಲಕ್ಷಾಂತರ ರೂಪಾಯಿ ಗುಳುಂ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.
ಚಿತ್ರದುರ್ಗ (ನ.23): ಜಿಲ್ಲೆಗೆ ಸೇರಿದ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ಸಾಮಾನ್ಯ ಸಭೆ ನಡೆಸದೆ ನಡಾವಳಿ ಪುಸ್ತಕದಲ್ಲಿ ತಮಗೆ ಬೇಕಾದ ಯೋಜನೆಗಳಿಗೆ ಸಹಿ ಹಾಕಿಸಿಕೊಂಡು ಲಕ್ಷಾಂತರ ರೂಪಾಯಿ ಗುಳುಂ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಭ್ರಷ್ಟಾಚಾರ ಬಗ್ಗೆ ಸುವರ್ಣನ್ಯೂಸ್ ಹಲವು ಬಾರಿ ವರದಿ ಪ್ರಸಾರ ಮಾಡಿತ್ತು. ಗ್ರಾಮ ಪಂಚಾಯ್ತಿ ಅವ್ಯವಸ್ಥೆ ಕುರಿತು 2016 ರ ಮೇ 30 ರಂದು ಪಿಡಿಒ ಕಚೇರಿಗೆ ಬರೋದೆ ಇಲ್ಲ, ತಾಲೂಕು ಕೇಂದ್ರದಲ್ಲೇ ಕುಳಿತು ತಮಗೆ ಬೇಕಾದ ಯೋಜನೆಗಳಿಗೆ ಬಿಲ್ ಪಾಸು ಮಾಡುತ್ತಿದ್ದಾರೆ ಅಂತ ಸುವರ್ಣ ನ್ಯೂಸ್ ನಲ್ಲಿ ‘ಬಾಡಿಗೆ ಅಧ್ಯಕ್ಷ’ ಎಂಬ ಶೀರ್ಷಿಕೆಯೊಂದಿಗೆ ವರದಿ ಪ್ರಸಾರ ಮಾಡಲಾಗಿತ್ತು. ಆದರೂ ಗ್ರಾಮ ಪಂಚಾಯಿತಿ ತನ್ನ ಹಳೆ ಚಾಳಿ ಬಿಡಲಿಲ್ಲ. ಆದರೆ ಮತ್ತೆ 2017 ರ ಏಪ್ರಿಲ್ 17 ರಂದು ಮತ್ತೊಮ್ಮೆ ವರದಿ ಪ್ರಸಾರ ಮಾಡುವ ಮೂಲಕ ಜಿಲ್ಲಾಪಂಚಾಯತ್ ಸಿಇಒ ಅವರ ಗಮನ ಸೆಳೆಯಲಾಗಿತ್ತು. ನಂತರ ದೂರು ದಾಖಲಿಸಿಕೊಂಡ ಸಿಇಒ ಅವರು, ತನಿಖೆಗೆ ಆದೇಶಿಸಿದ್ದರು, ಪಿಡಿಒ ಸಮೀಉಲ್ಲಾ ಮತ್ತು ಅಧ್ಯಕ್ಷೆ ಗೌರಮ್ಮ ವಿರುದ್ದದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಪ್ಪಿತಸ್ತರ ವಿರುದ್ದ ಈಗ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಇದು ಸುವರ್ಣನ್ಯೂಸ್ ಎಕ್ಸ್ಕ್ಲೂಸಿವ್ ಇಂಪ್ಯಾಕ್ಟ್ ವಾಗಿದೆ.
