ಭುವನೇಶ್ವರ[ಫೆ.19]: ಒಡಿಶಾದಲ್ಲಿ ನಡೆದ ಘಟನೆಯೊಂದು ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಭುವನೇಶ್ವರ ವಿಮಾನ ನಿಲ್ದಾಣದ ಬಳಿ ಚಿರತೆಯೊಂದು ಅಚಾನಕ್ಕಾಗಿ ಚಿರತೆ ಕಂಡು ಬಂದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ.

ಒಡಿಶಾದ ಭುವನೇಶ್ವರದಲ್ಲಿ ಪಲಾಸಪಲ್ಲಿಯ ನಿವಾಸಿಗರು ಹತ್ತಿರದ ಅಂಗಡಿಗೆ ಚಿರತೆ ನುಗ್ಗಿದ್ದು, ಈ ವಿಚರ ಅಲ್ಲಿನ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪರಿಶೀಲನೆ ನಡೆಸಿದ ಅಧಿಕಾರಿಗಳು ಇಲ್ಲಿನ ವಿಮಾನ ನಿಲ್ದಾಣದಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ನಿವಾಸದ ಬಳಿ ಚಿರತೆ ಕಂಡು ಬಂದಿರುವುದು ನಿಜ. ಇಲ್ಲಿನ ಸಿಸಿಟಿವಿಯಲ್ಲೂ ಈ ದೃಶ್ಯಗಳು ಸೆರೆಯಾಗಿರುವುದಾಗಿ ಖಚಿತ ಪಡಿಸಿದ್ದಾರೆ.

ಭಾನುವಾರ ರಾತ್ರಿ ಚಿರತೆಯು ಗೋಡೆಯೊಂದನ್ನು ಹಾರಿ ಬಂದಿದೆ ಎಂಬುವುದು ಸ್ಥಳೀಯರ ವಾದವಾಗಿದೆ. ಈಗಾಗಲೇ ಚಿರತೆ ಕಂಡು ಬಂದ ಪ್ರದೇಶಕ್ಕೆ 25 ಸಿಬ್ಬಂದಿಯನ್ನು ಕಳುಹಿಸಲಾಗಿದ್ದು, ಚಿರತೆ ಕಂಡು ಬಂದರೆ ಅದಕ್ಕೆ ಯಾವುದೇ ರೀತಿಯ ನೋವುಂಟು ಮಾಡದಿಲು ಅಧಿಕಾರಿಗಳು ಸೂಚಿಸಿದ್ದಾರೆ.