ನವದೆಹಲಿ: ವಾಯುಮಾಲಿನ್ಯ ಮಿತಿಮೀರಿದಾಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಾರಿಗೆ ಬರುವ ಸಮ- ಬೆಸ ಸಂಖ್ಯೆ ಆಧರಿತ ವಾಹನ ಓಡಾಟ ವ್ಯವಸ್ಥೆಯಿಂದ ದ್ವಿಚಕ್ರ ವಾಹನಗಳು ಹಾಗೂ ಮಹಿಳೆಯರು ಓಡಿಸುವ ವಾಹನಗಳಿಗೆ ಸುಪ್ರೀಂಕೋರ್ಟ್‌ ವಿನಾಯಿತಿ ಘೋಷಿಸಿದೆ.

ಸಮ- ಬೆಸಸಂಖ್ಯೆ ಆಧರಿತ ವಾಹನ ಓಡಾಟ ವ್ಯವಸ್ಥೆಯಲ್ಲಿ ಯಾರಿಗೂ ವಿನಾಯಿತಿ ಕೊಡಬಾರದು. ಎಲ್ಲರನ್ನೂ ಒಂದೇ ರೀತಿ ನೋಡಬೇಕು. ಇಲ್ಲದೇ ಇದ್ದರೆ ದೆಹಲಿಯ ವಾಯುಗುಣಮಟ್ಟಸುಧಾರಿಸುವ ಉದ್ದೇಶವೇ ಹಾಳಾಗುತ್ತದೆ ಎಂದು 2017ರ ನ.11ರಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಹಾಗೂ ದೀಪಕ್‌ ಗುಪ್ತಾ ಅವರಿದ್ದ ಪೀಠ ವಜಾಗೊಳಿಸಿದೆ.

ದೆಹಲಿಯಲ್ಲಿ 68 ಲಕ್ಷ ದ್ವಿಚಕ್ರ ವಾಹನಗಳು ಇವೆ. ಸಮ- ಬೆಸ ಸಂಖ್ಯೆ ಆಧರಿತ ಓಡಾಟ ವ್ಯವಸ್ಥೆ ಅನ್ವಯವಾದರೆ ಅಷ್ಟೊಂದು ಸಂಖ್ಯೆಯ ದ್ವಿಚಕ್ರ ವಾಹನ ಸವಾರರಿಗೆ ಪರಾರ‍ಯಯ ವ್ಯವಸ್ಥೆ ಕಲ್ಪಿಸಲು ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್‌ ಮುಂದೆ ದೆಹಲಿ ಸರ್ಕಾರ ವಾದ ಮಂಡಿಸಿತ್ತು.