ಅತ್ಯುತ್ತಮ ಅಧ್ಯಕ್ಷರುಗಳಿಗಾಗಿ 2000ನೇ ಸಾಲಿನಿಂದ ಸಮೀಕ್ಷೆ ನಡೆಸಲಾಗಿತ್ತು. ಈಗ ಪ್ರಕಟವಾಗಿರುವುದು ಮೂರನೇ ಸಮೀಕ್ಷೆಯಾಗಿದೆ.

ವಾಷಿಂಗ್ಟನ್ (ಫೆ.19): ಅಮೆರಿಕಾದ ಅತ್ಯುತ್ತಮ ಅಧ್ಯಕ್ಷರುಗಳ ಬಗ್ಗೆ ಸಮೀಕ್ಷೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮ 12 ನೇ ಅತ್ಯುತ್ತಮ ನಾಯಕ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

1913-1921ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ಹಾಗೂ 1817-1825 ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಜೇಮ್ಸ್ ಮನ್ರೋ ಅವರ ನಡುವಿನ ಸ್ಥಾನದಲ್ಲಿ, ಬರಾಕ್ ಒಬಾಮ ಇದ್ದಾರೆ ಎಂದು ವರದಿಗಳು ತಿಳಿಸಿವೆ.

ಅತ್ಯುತ್ತಮ ಅಧ್ಯಕ್ಷರುಗಳಿಗಾಗಿ 2000ನೇ ಸಾಲಿನಿಂದ ಸಮೀಕ್ಷೆ ನಡೆಸಲಾಗಿತ್ತು. ಈಗ ಪ್ರಕಟವಾಗಿರುವುದು ಮೂರನೇ ಸಮೀಕ್ಷೆಯಾಗಿದೆ.

ಸಂಕಷ್ಟದ ಸಂದರ್ಭಗಳಲ್ಲಿ ಸಮರ್ಥ ನಾಯಕತ್ವ ನೀಡಿದ ಅಧ್ಯಕ್ಷರು, ನೈತಿಕತೆ ಹೊಂದಿದ್ದವರು ಎಂದು ಅಭಿಪ್ರಾಯಿಸಲಾಗಿದೆ.