ವಿಶ್ವದ ದೊಡ್ಡಣ್ಣ ಬಾರಕ್ ಒಬಾಮ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಮುನ್ನುಡಿ ಬರೆದಿದ್ದಾರೆ. ವೈಟ್'ಹೌಸ್'ನ ಓವಲ್ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ದೀಪ ಬೆಳಗುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಸರಳವಾಗಿ ಆಚರಿಸಿದ್ದಾರೆ. 2009 ರಲ್ಲಿ ಭಾರತೀಯರಿಗೆ ಶುಭಾಷಯ ಕೋರುವ ಮೂಲಕ ದೀಪಾವಳಿ ಆಚರಿಸಿದ್ದ ಓಬಾಮ ಈ ಬಾರಿ ದೀಪ ಬೆಳಗುವ ಮೂಲಕ ವೈಟ್ ಹೌಸ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭಾರತೀಯ ಸಂಪ್ರದಾಯವನ್ನು ಎತ್ತಿ ಹಿಡಿದಿದ್ದಾರೆ. ಅಲ್ಲದೆ ಈ ಪದ್ದತಿಯನ್ನು ಮುಂಬರುವ ಅಧ್ಯಕ್ಷರು ಮುಂದುವರಿಸಲಿದ್ದಾರೆ ಎಂಬ ಅಶಯವನ್ನು ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್(ಅ.31): ವಿಶ್ವದ ದೊಡ್ಡಣ್ಣ ಬಾರಕ್ ಒಬಾಮ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಮುನ್ನುಡಿ ಬರೆದಿದ್ದಾರೆ. ವೈಟ್'ಹೌಸ್'ನ ಓವಲ್ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ದೀಪ ಬೆಳಗುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಸರಳವಾಗಿ ಆಚರಿಸಿದ್ದಾರೆ.
2009 ರಲ್ಲಿ ಭಾರತೀಯರಿಗೆ ಶುಭಾಷಯ ಕೋರುವ ಮೂಲಕ ದೀಪಾವಳಿ ಆಚರಿಸಿದ್ದ ಓಬಾಮ ಈ ಬಾರಿ ದೀಪ ಬೆಳಗುವ ಮೂಲಕ ವೈಟ್ ಹೌಸ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭಾರತೀಯ ಸಂಪ್ರದಾಯವನ್ನು ಎತ್ತಿ ಹಿಡಿದಿದ್ದಾರೆ. ಅಲ್ಲದೆ ಈ ಪದ್ದತಿಯನ್ನು ಮುಂಬರುವ ಅಧ್ಯಕ್ಷರು ಮುಂದುವರಿಸಲಿದ್ದಾರೆ ಎಂಬ ಅಶಯವನ್ನು ವ್ಯಕ್ತಪಡಿಸಿದ್ದಾರೆ.
ಇಡೀ ಜಗತ್ತಿಗೆ ಕುಟುಂಬದ ಪರವಾಗಿ ಶುಭಕೋರಿರುವ ಓಬಾಮ,ನೀವು ಮತ್ತು ನಿಮ್ಮ ಪ್ರೀತಿ ಪಾತ್ರರು ಸದಾ ಶಾಂತಿ ಮತ್ತು ಸಂತೋಷದಿಂದಿರಿ ಅಂತ ಹಾರೈಸಿದ್ದಾರೆ. ಬೆಳಕಿನ ಹಬ್ಬ ಆಚರಿಸುವವರು ಹಿಂದೂಗಳು, ಜೈನರು, ಸಿಖ್ಖರು, ಹಾಗು ಬೌದ್ಧ ಅಂತ ಭೇದಿಸದೆ ವಿಶ್ವದಾದ್ಯಂತ ಬೆಳಕಿನ ಹಬ್ಬವನ್ನು ಆಚರಿಸಿ ಎಂದು ಹೇಳಿದ್ದಾರೆ. ಅಲ್ಲದೆ ವೈಟ್ ಹೌಸ್'ನಲ್ಲಿ ಭಾರತೀಯ ಮೂಲದ ಸಹೂದ್ಯೋಗಿಗಳೊಂದಿಗೆ ದೀಪ ಬೆಳಗುವ ಫೋಟೊವನ್ನು ಫೇಸ್'ಬುಕ್ ನಲ್ಲಿ ಹಾಕುತ್ತಿದ್ದಂತೆ 1.5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು 33 ಸಾವಿರ ಮಂದಿ ಶೇರ್ ಮಾಡಿದ್ದಾರೆ.
ಸದ್ಯ ಅಮೆರಿಕಾ ಅಧ್ಯಕ್ಷರ ಈ ಐತಿಹಾಸಿಕ ಆಚರಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
