ಪ್ರಾಮಾಣಿಕತೆ ಮೆರೆದ ವಾಯವ್ಯ ಸಾರಿಗೆ ನಿಯಂತ್ರಣಾಧಿಕಾರಿಬಸ್‌ನಲ್ಲಿ ಬಿಟ್ಟು ಹೋಗಿದ್ದ ಆಭರಣ ಮಹಿಳೆಗೆ ವಾಪಸ್ಪ್ರಾಮಾಣಿಕತೆ ಮೆರೆದ ಸಾರಿಗೆ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಡೋಂಗ್ರೆ2.50 ಲಕ್ಷ ರೂ. ಮೌಲ್ಯದ ಆಭರಣ ಇದ್ದ ಲಗೇಜ್ ಮರಳಿಸಿದ ಅಧಿಕಾರಿ
ಹುಬ್ಬಳ್ಳಿ(ಜೂ.22): ಬಸ್‌ನಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ವಾಯವ್ಯ ಸಾರಿಗೆಯ ಹುಬ್ಬಳ್ಳಿ ಘಟಕದ ಸಾರಿಗೆ ನಿಯಂತ್ರಣಾಧಿಕಾರಿ ಸಂಬಂಧಪಟ್ಟವರಿಗೆ ಮರಳಿಸಿರುವ ಘಟನೆ ನಡೆದಿದೆ.
ಕಲಘಟಗಿಯಿಂದ ವಾಯಾ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆ ಹೊರಟಿದ್ದ ಬಸ್‌ನಲ್ಲಿ ಅನುಸೂಯಾ ಎಂಬುವವರು ಪ್ರಯಾಣಿಸುತ್ತಿದ್ದರು. ಅನುಸೂಯಾ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ ಇಳಿದುಕೊಂಡಿದ್ದಾರೆ. ಆದರೆ ಇಳಿಯುವ ಸಂದರ್ಭದಲ್ಲಿ ತಮ್ಮ ಬಳಿ ಇದ್ದ ಲಗೇಜ್ ನ್ನು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದಾರೆ.
ಸ್ವಲ್ಪ ಸಮಯದ ಬಳಿಕ ಬಸ್ ನಲ್ಲಿ ತಮ್ಮ ಲಗೇಜ್ ಬಿಟ್ಟ ವಿಚಾರ ಗೊತ್ತಾಗಿ ಕೂಡಲೇ ಸಾರಿಗೆ ನಿಯಂತ್ರಕ ಲಕ್ಷ್ಮಣ್ ಡೋಂಗ್ರೆ ಅವರ ಬಳಿ ತೆರಳಿ ಈ ವಿಚಾರ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಲಕ್ಷ್ಮಣ್ ಡೋಂಗ್ರೆ, ಬಸ್ ಸಂಚರಿಸುತ್ತಿರುವ ಮಾರ್ಗದ ಕುರಿತು ಪತ್ತೆ ಹಚ್ಚಿ ಆಭರಣ ಇದ್ದ ಲಗೇಜ್ ನ್ನು ಅನುಸೂಯಾ ಅವರಿಗೆ ಮರಳಿಸಿದ್ದಾರೆ. ಇದರಲ್ಲಿ ೨.೫೦ ಲಕ್ಷ ರೂ. ಮೌಲ್ಯದ ಆಭರಣ ಇತ್ತು ಎನ್ನಲಾಗಿದೆ.
ನವಲಗುಂದ ಮಾರ್ಗವಾಗಿ ವಿಜಯಪುರದತ್ತ ಸಂಚರಿಸುತ್ತಿದ್ದ ಬಸ್ ನ್ನು ನಿಲ್ಲಿಸಿ ಲಗೇಜ್ ನ್ನು ವಶಕ್ಕೆ ಪಡೆದ ಸಾರಿಗೆ ನಿಯಂತ್ರಣಾಧಿಕಾರಿ ಲಕ್ಷ್ಮಣ್, ಪೊಲೀಸರ ಸಮ್ಮುಖದಲ್ಲೇ ಅದನ್ನು ಅನುಸೂಯಾ ಅವರಿಗೆ ಹಸ್ತಾಂತರಿಸಿದ್ದಾರೆ. ಇನ್ನು ಲಕ್ಷ್ಮಣ್ ಡೋಂಗ್ರೆ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
