ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಬ್ಯಾಂಕ್ ಖಾತೆ ಮತ್ತು ಇತರ ಸೇವೆಗಳನ್ನು ಆಧಾರ್ ಜೊತೆ ಸಂಯೋಜನೆ ಮಾಡಬೇಕಾಗಿಲ್ಲ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಶುಕ್ರವಾರ ತಿಳಿಸಿದೆ.

ನವದೆಹಲಿ: ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಬ್ಯಾಂಕ್ ಖಾತೆ ಮತ್ತು ಇತರ ಸೇವೆಗಳನ್ನು ಆಧಾರ್ ಜೊತೆ ಸಂಯೋಜನೆ ಮಾಡಬೇಕಾಗಿಲ್ಲ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಶುಕ್ರವಾರ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2017 ಮತ್ತು ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಬ್ಯಾಂಕ್ ಖಾತೆ ಮತ್ತು ಪಾನ್ ನಂಬರ್ ಸಂಯೋಜನೆ ಆಧಾರ್ ನೋಂದಣಿಗೆ ಅರ್ಹರಾದ ವ್ಯಕ್ತಿಗಳಿಗೆ ಮಾತ್ರ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.