Asianet Suvarna News Asianet Suvarna News

ಮೋದಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ರಾಜೀನಾಮೆ!: ಕಾರಣವೇನು?

ಮೋದಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ರಾಜೀನಾಮೆ|  5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನೃಪೇಂದ್ರ ಮಿಶ್ರಾ| ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರನ್ನು ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ

Nripendra Misra Principal Secretary to PM Modi will leave office in two weeks
Author
Bangalore, First Published Aug 31, 2019, 9:53 AM IST

ನವದೆಹಲಿ[ಆ.31]: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನೃಪೇಂದ್ರ ಮಿಶ್ರಾ ಅವರು ಪ್ರಧಾನಿ ಕಚೇರಿ ತ್ಯಜಿಸಲು ನಿರ್ಧರಿಸಿದ್ದಾರೆ. ಆದರೆ, ಎರಡು ವಾರಗಳ ಕಾಲ ಹುದ್ದೆಯಲ್ಲಿ ಮುಂದುವರಿಯುವಂತೆ ಮೋದಿ ಅವರು ಮಿಶ್ರಾಗೆ ಸೂಚಿಸಿದ್ದಾರೆ.

ಇದೇ ವೇಳೆ ಮಿಶ್ರಾ ಅವರಿಂದ ಹುದ್ದೆ ತೆರವಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರನ್ನು ವಿಶೇಷ ಕರ್ತವ್ಯ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಪ್ರಧಾನಿ ಕಚೇರಿಯ ವಕ್ತಾರ ಸಿತಾಂಶುಕರ್‌ ಮಾಹಿತಿ ನೀಡಿದ್ದಾರೆ. ಮಿಶ್ರಾ ಅವರು 2014ರಿಂದ ಪ್ರಧಾನಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Nripendra Misra Principal Secretary to PM Modi will leave office in two weeks

‘1967ನೇ ಬ್ಯಾಚಿನ ಐಎಎಸ್‌ ಅಧಿಕಾರಿಯಾಗಿರುವ ಮಿಶ್ರಾ ಅತ್ಯಂತ ದಕ್ಷ ಅಧಿಕಾರಿಗಳ ಪೈಕಿ ಒಬ್ಬರಾಗಿದ್ದರು. 2014ರಲ್ಲಿ ದೆಹಲಿಗೆ ನಾನು ಹೊಸಬನಾಗಿದ್ದಾಗ ಮಿಶ್ರಾ ಅವರು ನನಗೆ ಸಾಕಷ್ಟುಸಂಗತಿಗಳನ್ನು ತಿಳಿಸಿಕೊಟ್ಟಿದ್ದರು ಮತ್ತು ಅವರ ಮಾರ್ಗದರ್ಶನಗಳು ಅತ್ಯಂತ ಮೌಲ್ಯಯುತವಾದದ್ದಾಗಿವೆ. ಮಿಶ್ರಾ ಅವರ ಬದುಕಿನ ಹೊಸ ಅಧ್ಯಾಯಕ್ಕೆ ಶುಭ ಹಾರೈಕೆಗಳು’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

Follow Us:
Download App:
  • android
  • ios