ಸಿಲಿಕಾನ್ ಸಿಟಿಯ ಈ ರಸ್ತೆಗಳಲ್ಲಿ ಸಂಚರಿಸುವ ನಿಮಗೇ ನಾವೂ ಬೆಂಗಳೂರಿನಲ್ಲಿ ಇದ್ದೇವೆ ಎಂಬ ಅನುಮಾನ ಮೂಡದಿರುವುದು. ಯಾಕೆಂದರೆ ವಿದೇಶದಲ್ಲಿ ಕಾಣುವಂತಹ ರಸ್ತೆಗಳು ನಿರ್ಮಾಣವಾಗಿದೆ. ಹೌದು ಇಂದು ನೃಪತುಂಗ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

ಬೆಂಗಳೂರು(ಮೇ.16): ಸಿಲಿಕಾನ್ ಸಿಟಿಯ ಈ ರಸ್ತೆಗಳಲ್ಲಿ ಸಂಚರಿಸುವ ನಿಮಗೇ ನಾವೂ ಬೆಂಗಳೂರಿನಲ್ಲಿ ಇದ್ದೇವೆ ಎಂಬ ಅನುಮಾನ ಮೂಡದಿರುವುದು. ಯಾಕೆಂದರೆ ವಿದೇಶದಲ್ಲಿ ಕಾಣುವಂತಹ ರಸ್ತೆಗಳು ನಿರ್ಮಾಣವಾಗಿದೆ. ಹೌದು ಇಂದು ನೃಪತುಂಗ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

ನೃಪತುಂಗ ರಸ್ತೆಯಲ್ಲಿ 2017ರ ಫೆಬ್ರವರಿ 27ರಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಾಗಿತ್ತು. ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಆರು ವಾರಗಳ ಗಡುವು ನೀಡಲಾಗಿತ್ತು. ಆದರೆ ನಿಗದಿತ ಅವಧಿಗೆ ಮುಗಿಯದೆ 10 ವಾರಗಳ ಬಳಿಕ ವೈಟ್ ಟಾಪಿಂಗ್ ಕೆಲಸ ಮುಗಿದಿದೆ. ಕಳೆದ ವಾರ ಸಂಚಾರಕ್ಕೆ ಮುಕ್ತವಾಗಿರುವ ನೃಪತುಂಗ ರಸ್ತೆ ಲೋಕಾರ್ಪಣೆ ಆಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಇವತ್ತು ಲೋಕಾರ್ಪಣೆ ಮಾಡಲಿದ್ದಾರೆ.

ನೃಪತುಂಗ ರಸ್ತೆಯಲ್ಲಿ ಕಾಮಗಾರಿಗಾಗಿ ಕಬ್ಬನ್ ಪಾರ್ಕ್ ಉದ್ಯಾನವನದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮೆಜೆಸ್ಟಿಕ್'ನಿಂದ ಶೇಷಾದ್ರಿಪುರಂ ರಸ್ತೆ ಮೂಲಕ ಬರುವ ವಾಹನಗಳನ್ನು ಕೆ.ಆರ್.ವೃತ್ತದಿಂದ ಕಬ್ಬನ್ ಪಾರ್ಕ್ ಒಳರಸ್ತೆ ಮೂಲ್ಕ ಕಾರ್ಪೊರೇಷನ್ ಕಡೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು. ಇದರಿಂದ ಉದ್ಯಾನವನದಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಿಪರೀತ ಹೊಗೆಯಿಂದ ಗಿಡಗಳು ಸಾವಿನ ಅಂಚಿನಲ್ಲಿವೆ ಅಂತ ಅಸಮಾಧಾನ ವ್ಯಕ್ತವಾಗಿತ್ತು.

ಇದರ ಜತೆಗೆ ಫೀಲ್ಡ್ ಮಾರ್ಷಲ್ ಕರಿಯಪ್ಪ ರಸ್ತೆ, ಜನರಲ್ ತಿಮ್ಮಯ್ಯ ರಸ್ತೆ, ಮ್ಯೂಸಿಯಂ ರಸ್ತೆ ಕೂಡಾ ಟೆಂಡರ್ ಶ್ಯೂರ್ ರಸ್ತೆಗಳಾಗಿ ಮಾರ್ಪಾಡು ಮಾಡಲಾಗಿದೆ. ಬರೋಬ್ಬರಿ 250 ಕೋಟಿ ವೆಚ್ಚದಲ್ಲಿ ನಗರದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ರಸ್ತೆಗಳು ನಿರ್ಮಾಣ ಆಗಿವೆ.