ಬಯಲಾಯ್ತು ವಿಪಕ್ಷ ನಾಯಕರ ಬಣ್ಣ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 7:52 AM IST
NRC Issue what other Opposition leaders said
Highlights

ಇದೀಗ ವಿಪಕ್ಷ ನಾಯಕರಾದ ಸೋನಿಯಾ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಬಗೆಗಿನ ಮಾಃಇತಿಯೀಗ ಬಯಲಾಗಿದೆ. 

ನವದೆಹಲಿ: ಬಾಂಗ್ಲಾದೇಶದ ಅಕ್ರಮ ವಲಸಿಗರ ಉಪಟಳ ಎದುರಿಸುತ್ತಿರುವ ಅಸ್ಸಾಂನಲ್ಲಿ ಅಕ್ರಮವಾಸಿಗಳನ್ನು ಗುರುತಿಸಲು ಅಲ್ಲಿನ ಸರ್ಕಾರ ಕೈಗೊಂಡಿರುವ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಕುರಿತು ದನಿ ಎತ್ತುತ್ತಿರುವ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ಸಿನ ಬಣ್ಣ ಬಯಲಾಗಿದೆ.

2006 ರಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆ ಸಮರ ತಾರಕಕ್ಕೇರಿದ್ದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಾಂಗ್ಲಾದೇಶದ ಅಕ್ರಮ ವಲಸಿಗರು ಅದರಲ್ಲೂ ಮುಸ್ಲಿಮರ ಮತ ಗಿಟ್ಟಿಸುವ ಸಲುವಾಗಿ ವಿದೇಶಿಗರ ಕಾಯ್ದೆಗೆ ತಿದ್ದುಪಡಿ ತಂದು ವಲಸಿಗರ ಗಡೀಪಾರು ತಪ್ಪಿಸುವುದಾಗಿ ಭರವಸೆ ನೀಡಿದ್ದ ಸಂಗತಿ ಬೆಳಕಿಗೆ ಬಂದಿದೆ. 

ಕೋಲ್ಕತಾದಲ್ಲಿನ ಅಮೆರಿಕ ಕಾನ್ಸುಲೇಟ್ ಅಧಿಕಾರಿಯೊಬ್ಬರು 2006 ರ ಫೆ.16 ರಂದು ತಮ್ಮ ಸರ್ಕಾರಕ್ಕೆ ಈ ಕುರಿತು ಕಳುಹಿಸಿದ್ದ ಮಾಹಿತಿ ವಿಕಿಲೀಕ್ಸ್ ಕೇಬಲ್‌ನಲ್ಲಿದೆ. ಆದರೆ ಈಗ ಕಾಂಗ್ರೆಸ್ ಆ ಬಗ್ಗೆ ಸೊಲ್ಲೆತ್ತುತ್ತಿಲ್ಲ.

loader