ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭವೋ - ನಷ್ಟವೋ..?

First Published 4, Aug 2018, 8:05 AM IST
NRC issue BJP has found an issue that helps it set the political agenda
Highlights

ಅಕ್ರಮ ಬಾಂಗ್ಲಾ ವಲಸಿಗರ ವಿಚಾರವನ್ನು ಲೋಕಸಭಾ ಚುನಾವಣೆಯಲ್ಲಿ ಮುಖ್ಯ ವಿಷಯವಾಗಿ ಪ್ರಸ್ತಾಪಿಸಿ ಲಾಭ ಗಿಟ್ಟಿಸಲು  ಬಿಜೆಪಿ  ಪ್ರಯತ್ನ ನಡೆಸಲಿದ್ದು, ಇದಕ್ಕೆ ಯಾವ ರೀತಿ ತಿರುಗೇಟು ನೀಡಬೇಕು ಎಂಬ ಬಗ್ಗೆ ಕಾಂಗ್ರೆಸ್ ಕೂಡ  ಚಿಂತಿಸಿದೆ. 

ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ವಿಚಾರವನ್ನು ಲೋಕಸಭಾ ಚುನಾವಣೆಯಲ್ಲಿ ಮುಖ್ಯ ವಿಷಯವಾಗಿ ಪ್ರಸ್ತಾಪಿಸಿ ಲಾಭ ಗಿಟ್ಟಿಸಲು  ಬಿಜೆಪಿ  ಪ್ರಯತ್ನ ನಡೆಸಲಿದ್ದು, ಇದಕ್ಕೆ ಯಾವ ರೀತಿ ತಿರುಗೇಟು ನೀಡಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀವ್ರ ಚಿಂತನೆ ನಡೆಸಿದೆ.

ಬಿಜೆಪಿಯು ಈ ವಿಚಾರವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಲಿದ್ದು, ಇದನ್ನು ಚುನಾವಣೆಯಲ್ಲಿ ಭಾವಾನಾತ್ಮಕ ವಿಷಯ ಮಾಡಿ  ‘ಭಾರತೀಯರು ವರ್ಸರ್ಸ್ ಬಾಂಗ್ಲಾದೇಶೀಯರು’ ಎಂಬಂತೆ ಈ ವಿಚಾರವನ್ನು ಬೆಳೆಸಿ ಲಾಭ ಮಾಡಿಕೊಳ್ಳಲು ಹವಣಿಸಲಿದೆ. ಹೀಗಾಗಿ ರಾಜ್ಯದಲ್ಲೂ ಈ ವಿಚಾರ ಪ್ರಸ್ತಾಪವಾಗಲಿದೆ. ರಾಜ್ಯದಲ್ಲೂ ಬಾಂಗ್ಲಾದೇಶೀಯರಿದ್ದು, ಅದರ ಲಾಭವನ್ನು ಬಿಜೆಪಿ ಗಿಟ್ಟಿಸಲು ಯತ್ನಿಸಲಿದೆ. 

ಇದನ್ನು ಹೇಗೆ ತಡೆಯುವುದು ಮತ್ತು ಇದಕ್ಕೆ ಪ್ರತಿತಂತ್ರವನ್ನು ರೂಪಿಸಬೇಕು ಎಂದು ಶುಕ್ರವಾರ ನಡೆದ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ, ಏನು ಮಾಡಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. 

loader