Asianet Suvarna News Asianet Suvarna News

ನಾರಾಯಣ ಮೂರ್ತಿ ಐಎಎಸ್ ಬಿಟ್ಟು ಇಂಜಿನಿಯರ್ ಆಗಿದ್ದೇಕೆ ಗೊತ್ತಾ ? ಅವರೆ ಬಿಚ್ಚಿಟ್ಟ ಸತ್ಯ

ಎಸ್'ಎಸ್'ಎಲ್'ಸಿ 4ನೇ ಹಾಗೂ ಪಿಯುಸಿಯಲ್ಲಿ 3ನೇ ರಾಂಕ್ ಪಡೆದ ನಂತರ ಏನು ಮಾಡಬೇಕು ಎಂಬ ಆಲೋಚನೆಯಲ್ಲಿದ್ದರು.

NR Narayan Murhy reveal his Childhood memories

ಭಾರತದ ಐಟಿ ಕ್ಷೇತ್ರದ ದಿಗ್ಗಜ ಕನ್ನಡಿಗ ಇನ್ಫೋ'ಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಒಂದು ಸಮಯದಲ್ಲಿ ಐಎಎಸ್ ಸೇರಲು ಯೋಚಿಸಿದ್ದರೆ ? ಹೌದು ಭಾರತ ಆಡಳಿತ ಸೇವೆ ಸೇರಲು ಒಂದು ಕ್ಷಣ ಯೋಚಿಸಿದ್ದರು. ಇದು ಬಹಳ ಮಂದಿಗೆ ಗೊತ್ತಿರಕ್ಕಿಲ್ಲ.

ಎಸ್'ಎಸ್'ಎಲ್'ಸಿ 4ನೇ ಹಾಗೂ ಪಿಯುಸಿಯಲ್ಲಿ 3ನೇ ರಾಂಕ್ ಪಡೆದ ನಂತರ ಏನು ಮಾಡಬೇಕು ಎಂಬ ಆಲೋಚನೆಯಲ್ಲಿದ್ದರು. ಈ ರೀತಿ ಯೋಚಿಸುತ್ತಿದ್ದಾಗ ಅವರ ಸಂಬಂಧಿಕರೊಬ್ಬರು ಒಂದು ಕಾಲದಲ್ಲಿ ಐಎಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸಿರುವುದು ಮನಸ್ಸಿನಲ್ಲಿ ಮೂಡಿತು.

ಸೌಲಭ್ಯಕ್ಕಾಗಿ ಒಂದು ಕ್ಷಣ ಯೋಚನೆ !

ನಾರಾಯಣ ಮೂರ್ತಿ ಅವರ ಸಂಬಂಧಿಕರೊಬ್ಬರು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಮೈಸೂರು ಸಿವಿಲ್ ಸರ್ವೀಸ್'ನಿಂದ ಬಡ್ತಿ ಪಡೆದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ದೊಡ್ಡ ಬಂಗಲೆ, ಕಾರು ಸೇರಿದಂತೆ ಹಲವು ಸೌಲಭ್ಯಗಳು ದೊರೆಯುತ್ತಿತ್ತು. ಸಣ್ಣ ವಯಸ್ಸಿನಲ್ಲಿ ಮಂಡ್ಯದಲ್ಲಿ ಕಾಲ ಕಳೆದಿದ್ದ ಕಾರಣ ಭಾರತೀಯ ಆಡಳಿತ ಸೇವಾ ಅಧಿಕಾರಿಯಾದರೆ ಏನೆಲ್ಲ ಸೌಲಭ್ಯ ಸಿಗುತ್ತದೆಂದು ತಿಳಿದುಕೊಂಡಿದ್ದರು.

ಐಎಎಸ್ ಅಧಿಕಾರಿಯಾಗಬೇಕಾದರೆ ಪರೀಕ್ಷೆಗೆ ಕುಳಿತು ತಿಂಗಳುಗಟ್ಟಳೆ ತಯಾರಿ ನಡೆಸಬೇಕು. ಯಶಸ್ಸು ಸಿಗಬಹುದು ಅಥವಾ ಸಿಗದೇ ಇರಬಹುದು. ಆದರೆ ಇಂಜಿನಿಯರಿಂಗ್ ಅಥವಾ ವೈದ್ಯರಾದರೆ ದೇಶದ ಯಾವ ಕಡೆ ಬೇಕಾದರೂ ಉದ್ಯೋಗ ಸಿಗುತ್ತದೆ. ನಾರಾಯಣ್ ಮೂರ್ತಿ ಅವರ ಪೋಷಕರು ಈ ಸಲಹೆ ನೀಡಿದರು. ಈ ಕಾರಣದಿಂದ ಐಎಎಸ್ ಯೋಚನೆ ಬಿಟ್ಟು ಇಂಜಿನಿಯರಿಂಗ್ ಪದವೀಧರರಾದರು. ಮುಂದೆ ಐವರು ಸ್ನೇಹಿತರೊಡಗೂಡಿ ಇನ್ಫೋಸಿ'ಸ್ ಸ್ಥಾಪಿಸಿ ಜಾಗತಿಕ ಉದ್ಯಮಿಯಾಗಿದ್ದು ಇತಿಹಾಸ.

(ಡಿಡಿ ಚಂದನದ ಸಂದರ್ಶನದಲ್ಲಿ ತಿಳಿಸಿದ ಆಯ್ದ ಭಾಗ )

Follow Us:
Download App:
  • android
  • ios