Asianet Suvarna News Asianet Suvarna News

ಅಹಮದಾಬಾದ್ ಕರ್ಣಾವತಿ?: ಎಲ್ಲಾ ನಗರಗಳಿಗೂ ಇದೇ ಗತಿ!

ದೇಶದಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಜಿಲ್ಲೆ ಹಾಗೂ ಕೆಲ ಪ್ರದೇಶಗಳ ಹೆಸರು ಬದಲಾವಣೆ ನಡೆಯುತ್ತಿದೆ. ಸದ್ಯ ಗುಜರಾತ್‌ ಸರ್ಕಾರವು ಅಹಮದಾಬಾದ್ ಹೆಸರು ಬದಲಾಯಿಸಿ ಕರ್ಣಾವತಿ ಎಂದು ಮರು ನಾಮಕರಣ ಮಾಡಲು ಚಿಂತನೆ ನಡೆಸುತ್ತಿದೆ.

Now Gujarat Govt Says Ready to Rename Ahmedabad as Karnavati
Author
Ahmedabad, First Published Nov 7, 2018, 12:38 PM IST

ಅಹಮದಾಬಾದ್[ನ.07]: ದೇಶದಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಜಿಲ್ಲೆ ಹಾಗೂ ಕೆಲ ಪ್ರದೇಶಗಳ ಹೆಸರು ಬದಲಾವಣೆ ನಡೆಯುತ್ತಿದೆ. ಹೀಗೆ ಬದಲಾಗುತ್ತಿರುವ ನಗರದಗಳ ಪಟ್ಟಿಗೆ ಗುಕಜರಾತ್‌ನ ಅಹಮದಾಬಾದ್ ಕೂಡಾ ಶೀಘ್ರದಲ್ಲೇ ಸೇರ್ಪಡೆಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ. ಕಾನೂನು ಅಡಚಣೆಗಳನ್ನು ಎದುರಿಸಲು ಜನರು ಬೆಂಬಲ ಸೂಚಿಸಿದರೆ ಹೆಸರು ಬದಲಾಯಿಸುವುದು ಖಚಿತ ಎಂದಿದೆ ಗುಜರಾತ್ ಸರ್ಕಾರ. 

ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಞಸಿರುವ ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್‌ಭಾಯಿ ಪಟೇಲ್ ’ದೀರ್ಘ ಸಮಯದಿಂದ ಇಲ್ಲಿನ ಜನರು ಅಹಮದಾಬಾದ್ ಹೆಸರನ್ನು ಬದಲಾಯಿಸಿ ಕರ್ಣಾವತಿ ಎಂದು ಮರು ನಾಮಕರಣ ಮಾಡಲು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ನಮಗೆ ಕಾನೂನು ಅಡಚಣೆಗಳನ್ನು ಎದುರಿಸಲು ಜನರ ಬೆಂಬಲ ಸಿಕ್ಕರೆ ನಾವು ಹೆಸರು ಬದಲಾಯಿಸಲು ಸಿದ್ಧರಿದ್ದೇವೆ ಎಂದಿದ್ದಾರೆ. ಅಹಮದಾಬಾದ್ ಜನರು ಕೂಡಾ ಕರ್ಣಾವತಿ ಹೆಸರನ್ನು ಇಷ್ಟಪಟ್ಟಿದ್ದಾರೆ, ಸರಿಯಾದ ಸಮಯಕ್ಕೆ ಹೆಸರು ಬದಲಾಯಿಸಲಾಗುವುದು’ ಎಂದಿದ್ದಾರೆ. ಕರ್ಣಾವತಿ ಇಲ್ಲಿನ ಪ್ರಾಚೀನ ಹೆಸರು ಎಂದೂ ಹೇಳಲಾಗುತ್ತದೆ.

ಅಹಮದಾಬಾದ್ ಇತಿಹಾಸವನ್ನು ಗಮನಿಸುವುದಾದರೆ ಇಲ್ಲಿ 11ನೇ ಶತಮಾನದಲ್ಲಿ ಜನವಸತಿ ಆರಂಭವಾಗಿತ್ತೆಂದು ತಿಳಿದು ಬರುತ್ತದೆ. ಅಂದು ಈ ನಗರ ಆಶಾವಲ್ ಹೆಸರಿನಿಂದ ಪ್ರಸಿದ್ಧವಾಗಿತ್ತು. ಆದರೆ ಚಾಲುಕ್ಯ ವಂಶದ ರಾಜ ಕರ್ಣ ಆಶಾವಲ್‌ನ ಬಿಲ್[ಇಲ್ಲಿ ನೆಲೆಸುತ್ತಿದ್ದ ಒಂದು ಸಮುದಾಯ] ರಾಜನ ಮೇಲೆ ದಾಳಿ ನಡೆಸಿ ಈ ಕ್ಷೇತ್ರವನ್ನು ವಶಪಡಿಸಿಕೊಂಡಿದ್ದರು. ಇದಾದ ಬಳಿಕ ಅವರು ಸಬರಮಯತಿ ನದಿ ದಡದಲ್ಲಿ ಕರ್ಣಾವತಿ ಹೆಸರಿನಲ್ಲಿ ನಗರ ನಿರ್ಮಿಸಿದ್ದರು.

ಆದರೆ 1411ನೇ ಇಸವಿಯಲ್ಲಿ ಕರ್ಣಾವತಿ ಸಮೀಪದಲ್ಲಿ ಒಂದು ಹೊಸ ನಗರ ನಿರ್ಮಿಸಲು ಶಿಲಾನ್ಯಾಸ ಮಾಡಿದ ಸುಲ್ತಾನ್ ಅಹ್ಮದ್ ಶಾಹ್, ಅಲ್ಲೇ ಹತ್ತಿರದಲ್ಲಿ ವಾಸಿಸುತ್ತಿದ್ದ ಓರ್ವ ಸಂತರ ಹೆಸರನ್ನೇ ನೀಡಿದ್ದರು. ಇದಾದ ಬಳಿಕ ಕರ್ಣಾವತಿಯನ್ನೂ ಅಹಮದಾಬಾದ್ ಎಂದು ಕರೆಯಲಾರಂಭಿಸಿದರು.

Follow Us:
Download App:
  • android
  • ios