ಶೌಚಾಲಯ ಎಂಬುದು ಸಣ್ಣ ವಿಷಯವಲ್ಲ. ನಾಗರಿಕವಾದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ಅದು ವಹಿಸುತ್ತದೆ ಎಂದು ಚೀನಾ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಬೀಜಿಂಗ್(ನ.30): ದೇಶದ ಪ್ರತಿ ಮನೆಗೂ ಶೌಚಾಲಯ ಕಟ್ಟಿಸಿಕೊಡಲು ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ‘ಸ್ವಚ್ಛ ಭಾರತ ಅಭಿಯಾನ’ ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮನಗೆದ್ದಿರುವಂತಿದೆ. ಚೀನಾದ ಗ್ರಾಮೀಣ ಭಾಗಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ಸುಧಾರಣೆಗೆ ಕ್ಸಿ ಅವರು ಕರೆ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೌಚಾಲಯ ಎಂಬುದು ಸಣ್ಣ ವಿಷಯವಲ್ಲ. ನಾಗರಿಕವಾದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ಅದು ವಹಿಸುತ್ತದೆ ಎಂದು ಚೀನಾ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ಶೌಚಾಲಯಗಳು ಇಲ್ಲ. ಜೋಳದ ಕಂತೆಗಳನ್ನು ಸುತ್ತ ಇಟ್ಟುಕೊಂಡು ನಿತ್ಯ ಕರ್ಮವನ್ನು ಜನರು ಮುಗಿಸುತ್ತಾರೆ. ಜತೆಗೆ ಹಂದಿ ಸಾಗಣೆ ಕೊಠಡಿಗಳ ಬಳಿ ತೆರೆದ ಶೌಚಾಲಯ ನಿರ್ಮಿಸಿಕೊಂಡು ಅದನ್ನು ಬಳಸುತ್ತಿದ್ದಾರೆ.

ಹೀಗಾಗಿ ಇಂತಹ ತಾತ್ಕಾಲಿಕ ಶೌಚಾಲಯಗಳನ್ನು ಮೇಲ್ದರ್ಜೆ ಗೇರಿಸಲು ಶೌಚಾಲಯ ಕ್ರಾಂತಿಗೆ ಜಿನ್‌ಪಿಂಗ್ ಅವರು ಕರೆ ನೀಡಿದ್ದಾರೆ. ಚೀನಾಕ್ಕೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಶೌಚಾಲಯ, ನೈರ್ಮಲ್ಯ, ಬಗ್ಗೆ ದೂರುಗಳನ್ನು ನೀಡಿದ್ದರು. ಹೀಗಾಗಿ 2015ರಲ್ಲಿ ಮೊದಲ ಬಾರಿಗೆ ಶೌಚಾಲಯ ಕ್ರಾಂತಿಯನ್ನು ಚೀನಾ ಆರಂಭಿಸಿತ್ತು.