ನವದೆಹಲಿ: ಖಾದಿಯ ಟ್ರೇಡ್‌ಮಾರ್ಕ್ ಆಗಿರುವ ಚರಕದ ಚಿಹ್ನೆಯನ್ನು ಅನುಮತಿಯಿಲ್ಲದೆ ಅಕ್ರಮವಾಗಿ ತನ್ನ ಕಂಪನಿಯ ಬಟ್ಟೆಗಳ ಮಾರಾಟದ ವೇಳೆ ಬಳಸಿಕೊಂಡ ಫ್ಯಾಬ್‌ ಇಂಡಿಯಾ ವಿರುದ್ಧ 525 ಕೋಟಿ ರು. ಪರಿಹಾರ ನೀಡುವಂತೆ ನೋಟಿಸ್‌ ರವಾನಿಸಲಾಗಿದೆ. 

ತನ್ನ ಕಂಪನಿ ಬಟ್ಟೆಗಳ ಮೇಲಿರುವ ಚರಕದ ಗುರುತು ತೆಗೆದುಹಾಕದಿದ್ದರೆ ಸಾಂಪ್ರದಾಯಿಕ ಉಡುಗೆ-ತೊಡುಗೆ ಮಾರಾಟ ಕಂಪನಿಯಾದ ಫ್ಯಾಬ್‌ ಇಂಡಿಯಾ ವಿರುದ್ಧ ಕಾನೂನು ಸಮರ ನಡೆಸುವುದಾಗಿಯೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(ಕೆವಿಐಸಿ) ಎಚ್ಚರಿಸಿದೆ. ಆದರೆ, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಫ್ಯಾಬ್‌ ಇಂಡಿಯಾ ವಕ್ತಾರ, ಕೆವಿಐಸಿ ಆರೋಪವು ನಿರಾಧಾರ ಎಂದು ತಿಳಿಸಿದ್ದಾರೆ.