ಮುಂಬೈನ ವರ್ಸೊವಾದಲ್ಲಿರುವ 20 ಅಂತಸ್ತಿನ ಕಟ್ಟಡದಲ್ಲಿ ಮೂರು ಪ್ಲಾಟ್‌ಗಳನ್ನು ಹೊಂದಿರುವ ಅನುಷ್ಕಾ ಶರ್ಮಾ, ಪಾಲಿಕೆಯಿಂದ ಅನುಮತಿ ಪಡೆಯದೇ ವಿದ್ಯುತ್ ಜಂಕ್ಷನ್ ಬಾಕ್ಸ್‌ಗಳನ್ನು ಕಟ್ಟಡದ ಸಾಮಾನ್ಯ ಮಾರ್ಗದಲ್ಲಿ ಅಳವಡಿಸಿದ್ದಾರೆ
ಮುಂಬೈ(ಏ.10): ತನ್ನ ಅನುಮತಿ ಪಡೆಯದೇ ತಮ್ಮ ಅಪಾರ್ಟ್ಮೆಂಟ್ನ ಕಾಮನ್ ಏರಿಯಾದಲ್ಲಿ ವಿದ್ಯುತ್ ಜಂಕ್ಷನ್ ಬಾಕ್ಸ್ ಅಳವಡಿಸಿದ ಆರೋಪದ ಮೇರೆಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನೋಟಿಸ್ ಜಾರಿ ಮಾಡಿದೆ.
ಮುಂಬೈನ ವರ್ಸೊವಾದಲ್ಲಿರುವ 20 ಅಂತಸ್ತಿನ ಕಟ್ಟಡದಲ್ಲಿ ಮೂರು ಪ್ಲಾಟ್ಗಳನ್ನು ಹೊಂದಿರುವ ಅನುಷ್ಕಾ ಶರ್ಮಾ, ಪಾಲಿಕೆಯಿಂದ ಅನುಮತಿ ಪಡೆಯದೇ ವಿದ್ಯುತ್ ಜಂಕ್ಷನ್ ಬಾಕ್ಸ್ಗಳನ್ನು ಕಟ್ಟಡದ ಸಾಮಾನ್ಯ ಮಾರ್ಗದಲ್ಲಿ ಅಳವಡಿಸಿದ್ದಾರೆ ಎಂದು ಅದೇ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಏ.6ರಂದು ನೋಟಿಸ್ ನೀಡಲಾಗಿದೆ.
ಆದರೆ, ಈ ಆರೋಪವನ್ನು ನಿರಾಕರಿಸಿರುವ ಅನುಷ್ಕಾ ವಕ್ತಾರರು, ‘ಅನುಷ್ಕಾ ಯಾವುದೇ ತಪ್ಪು ಮಾಡಿಲ್ಲ. 2013ರಲ್ಲೇ ಜಂಕ್ಷನ್ ಬಾಕ್ಸ್ ಹಾಕಲು ಅನುಮತಿ ಪಡೆಯಲಾಗಿದೆ. ಅನುಷ್ಕಾ ಕಾನೂನು ಪರಿಪಾಲಕಿ’ ಎಂದು ಹೇಳಿದ್ದಾರೆ.
