ಸಂತೋಷ್‌ ಅವರ ಬಗ್ಗೆ ವೈಯಕ್ತಿಕವಾಗಿ ಭಿನ್ನಾಭಿಪ್ರಾಯವಿಲ್ಲ. ಆದರೂ ಅವರು ಮಾತ್ರ ಪಕ್ಷದಲ್ಲಿನ ಮುಖಂಡರನ್ನು ತಮ್ಮ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥವರ ಜತೆ ಕೆಲಸ ಮಾಡಲು ಸಾಧ್ಯವಿಲ್ಲ. ರಾಜ್ಯದ ವ್ಯವಹಾರಗಳಿಂದ ಅವರನ್ನು ದೂರ ಇರಿಸುವುದೊಂದೇ ಪರಿಹಾರ ಎಂಬ ಅಭಿಪ್ರಾಯವನ್ನು ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಯಡಿಯೂರಪ್ಪ ಅವರು ತಮ್ಮ ವಿರುದ್ಧ ಬಹಿರಂಗವಾಗಿ ಹರಿಹಾಯುತ್ತಿರುವ ಈಶ್ವರಪ್ಪ ಅವರಿಗಿಂತ ಮೌನವಾಗಿರುವ ಸಂತೋಷ್‌ ತುಂಬಾ ಅಪಾಯಕಾರಿ ಎಂಬ ನಿಲುವಿಗೆ ಬಂದಿದ್ದಾರೆ.
ಮಾತಾಡುವ ಈಶ್ವರಪ್ಪಗಿಂತ ಮೌನಿ ಸಂತೋಷ್ ಡೇಂಜರ್
ಬೆಂಗಳೂರು: ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಜತೆ ಕೆಲಸ ಮಾಡಲು ಸಾಧ್ಯವಿಲ್ಲ. ಅವರನ್ನು ರಾಜ್ಯ ವ್ಯವಹಾರಗಳಿಂದ ದೂರವಿಡಿ ಎಂಬ ಖಡಕ್ ಸಂದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ಗೆ ರವಾನಿಸಿದ್ದಾರೆ. ಪಕ್ಷದಲ್ಲಿನ ಭಿನ್ನಮತ ಚಟುವಟಿಕೆಗಳಿಗೆ, ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಹುಟ್ಟು ಹಾಕುವಲ್ಲಿ ಸಂತೋಷ್ ಅವರ ಪಾತ್ರ ಪ್ರಮುಖವಾದದ್ದು ಎಂಬುದಕ್ಕೆ ಹಲವಾರು ಪೂರಕ ಸಾಕ್ಷ್ಯಗಳಿವೆ. ಹೀಗಾಗಿ, ಸಂತೋಷ್ ಅವರನ್ನು ದೂರವಿರಿಸಿ ಎಂದು ಅವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರೊಂದಿಗೆ ಯಡಿಯೂರಪ್ಪ ಅವರು ದೂರವಾಣಿಯಲ್ಲಿ ಮಾತನಾಡಿ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಸಂತೋಷ್ ಅವರ ಬಗ್ಗೆ ವೈಯಕ್ತಿಕವಾಗಿ ಭಿನ್ನಾಭಿಪ್ರಾಯವಿಲ್ಲ. ಆದರೂ ಅವರು ಮಾತ್ರ ಪಕ್ಷದಲ್ಲಿನ ಮುಖಂಡರನ್ನು ತಮ್ಮ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥವರ ಜತೆ ಕೆಲಸ ಮಾಡಲು ಸಾಧ್ಯವಿಲ್ಲ. ರಾಜ್ಯದ ವ್ಯವಹಾರಗಳಿಂದ ಅವರನ್ನು ದೂರ ಇರಿಸುವುದೊಂದೇ ಪರಿಹಾರ ಎಂಬ ಅಭಿಪ್ರಾಯವನ್ನು ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಯಡಿಯೂರಪ್ಪ ಅವರು ತಮ್ಮ ವಿರುದ್ಧ ಬಹಿರಂಗವಾಗಿ ಹರಿಹಾಯುತ್ತಿರುವ ಈಶ್ವರಪ್ಪ ಅವರಿಗಿಂತ ಮೌನವಾಗಿರುವ ಸಂತೋಷ್ ತುಂಬಾ ಅಪಾಯಕಾರಿ ಎಂಬ ನಿಲುವಿಗೆ ಬಂದಿದ್ದಾರೆ.
ಒಟ್ಟಾರೆ ಬೆಳವಣಿಗೆಗಳ ಹಿಂದೆ ಸಂತೋಷ್ ಅವರ ಕೈವಾಡವಿರುವುದು ಸ್ಪಷ್ಟ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಹುಟ್ಟಿಗೆ ಮುಖ್ಯ ಕಾರಣಕರ್ತರು ಸಂತೋಷ್ ಹೊರತು ಈಶ್ವರಪ್ಪ ಅಲ್ಲ. ಸಂಗೊಳ್ಳಿ ರಾಯಣ್ಣ ಹೆಸರು ನಾಮಕಾರಣ ಮಾಡಿರುವುದೂ ಸಂತೋಷ್. ಇದೆಲ್ಲವೂ ಪಕ್ಷದ ಕಚೇರಿಯಲ್ಲಿರುವ ಅವರ ಕೊಠಡಿಯಲ್ಲೇ ನಡೆದಿದೆ ಎಂಬ ಅಸಮಾಧಾನವನ್ನು ಯಡಿಯೂರಪ್ಪ ಅವರು ಆಪ್ತ ಮುಖಂಡರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
