ಅಧಿವೇಶನ ರದ್ದು ರಾಜ್ಯ ಸರ್ಕಾರದ ನಿರ್ಧಾರವಲ್ಲ. ಕಲಾಪಕ್ಕೆ ರಜೆ ನೀಡುವ ನಿರ್ಧಾರ ಸ್ಪೀಕರ್ ತೆಗೆದುಕೊಂಡಿದ್ದು, ಸ್ಪೀಕರ್​ ನಿರ್ಧಾರವನ್ನು ಬಿಜೆಪಿ ಮಾತ್ರ ವಿರೋಧಿಸಿದೆ

ಧಾರವಾಡ(ನ.25): ನವೆಂಬರ್​ 28ರಂದು ಭಾರತ್​​ ಬಂದ್​​ ಹಿನ್ನೆಲೆಯಲ್ಲಿ ನಾವು ಬಂದ್'ಗೆ ಬೆಂಬಲ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಧಿವೇಶನ ರದ್ದು ರಾಜ್ಯ ಸರ್ಕಾರದ ನಿರ್ಧಾರವಲ್ಲ. ಕಲಾಪಕ್ಕೆ ರಜೆ ನೀಡುವ ನಿರ್ಧಾರ ಸ್ಪೀಕರ್ ತೆಗೆದುಕೊಂಡಿದ್ದು, ಸ್ಪೀಕರ್​ ನಿರ್ಧಾರವನ್ನು ಬಿಜೆಪಿ ಮಾತ್ರ ವಿರೋಧಿಸಿದೆ. ನೋಟು ಬ್ಯಾನ್​ ಮಾಡಿದ್ದಕ್ಕೆ ನಮ್ಮ ವಿರೋಧವಿಲ್ಲ.ಪೂರ್ವ ತಯಾರಿ ಇಲ್ಲದಿದ್ದಕ್ಕೆ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ.ಆದರೆ ಇದುವರೆಗೂ ನಮಗೆ ಉತ್ತರ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.