Asianet Suvarna News Asianet Suvarna News

ಹೊಸ ನೋಟುಗಳು ಗುರುವಾರ ಬಿಡುಗಡೆಯಾಗುವ ಕಾರಣ ಸಾರ್ವಜನಿಕರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ

ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳಿಗೆ ತಿಲಾಂಜಲಿ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ಮಧ್ಯರಾತ್ರಿಯಿಂದಲೇ 500 ಮತ್ತು 1,000 ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಗುರುವಾರವೇ(ನ.10) 500 ಮತ್ತು 2,000 ಮುಖಬೆಲೆಯ ಹೊಸ ನೋಟುಗಳು ಬಿಡುಗಡೆಯಾಗುವ ಕಾರಣ, ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ.

Not Need to worry About Currency

ನವದೆಹಲಿ (ನ.08): ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳಿಗೆ ತಿಲಾಂಜಲಿ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ಮಧ್ಯರಾತ್ರಿಯಿಂದಲೇ 500 ಮತ್ತು 1,000 ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಗುರುವಾರವೇ(ನ.10) 500 ಮತ್ತು 2,000 ಮುಖಬೆಲೆಯ ಹೊಸ ನೋಟುಗಳು ಬಿಡುಗಡೆಯಾಗುವ ಕಾರಣ, ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ.

ತಮ್ಮಲ್ಲಿ ಈಗಾಗಲೇ ಇರುವ 500, 1,000ದ ನೋಟುಗಳನ್ನು ಬ್ಯಾಂಕುಗಳು ಅಥವಾ ಅಂಚೆ ಕಚೇರಿಗಳಿಗೆ ಹೋಗಿ ಪ್ಯಾನ್ ಕಾರ್ಡ್, ಆಧಾರ್‌ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ನಿಮ್ಮ ಖಾತೆಗೆ ಜಮೆ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 50 ದಿನಗಳ ಅವಕಾಶವನ್ನು ಸರ್ಕಾರ ನೀಡಿದೆ. ಆದರೆ, ನಿಮ್ಮಲ್ಲಿರುವ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕೆಂದರೆ, ದಿನಕ್ಕೆ 4 ಸಾವಿರದ ಮಿತಿ ಹೇರಲಾಗಿದ್ದು, ಇದಕ್ಕೆ ನ.10ರಿಂದ 24ರವರೆಗೆ ಮಾತ್ರ ಅವಕಾಶವಿರುತ್ತದೆ.

ಆಮೂಲಾಗ್ರ ಬದಲಾವಣೆ: ಸ್ವಾತಂತ್ರ್ಯಾನಂತರ ಕಪ್ಪುಹಣ ನಿಯಂತ್ರಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಕ್ರಮ ಕೈಗೊಳ್ಳಲಾಗಿದೆ. ದಿಢೀರನೆ ದೇಶದ ಕರೆನ್ಸಿ ಚಲಾವಣೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ಘೋಷಿಸುವ ಮೂಲಕ ಪ್ರಧಾನಿ ಮೋದಿ ಅವರು ಇಡೀ ದೇಶಕ್ಕೆ ದೇಶವನ್ನೇ ಅಚ್ಚರಿಯಲ್ಲಿ ಮುಳುಗಿಸಿದ್ದಾರೆ. ಮಂಗಳವಾರ ರಾತ್ರಿ ಏಕಾಏಕಿ ಮಾಧ್ಯಮಗಳ ಮೂಲಕ ಮೊದಲ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.

ಮೊದಲು ಹಿಂದಿಯಲ್ಲಿ, ನಂತರ ಇಂಗ್ಲಿಷ್‌ನಲ್ಲಿ ಸುಮಾರು 40 ನಿಮಿಷಗಳ ಕಾಲ ಮಾತನಾಡಿದ ಅವರು, ‘‘ಇನ್ನು ಮುಂದೆ 500 ಮತ್ತು 1,000 ಮುಖಬೆಲೆಯ ನೋಟುಗಳು ಕೇವಲ ಕಾಗದವೇ ಹೊರತು, ಅದಕ್ಕೆ ಯಾವುದೇ ವೌಲ್ಯವಿರುವುದಿಲ್ಲ. ಈ ನೋಟುಗಳ ಮುದ್ರಣ ಮಂಗಳವಾರ ಮಧ್ಯರಾತ್ರಿಯಿಂದಲೇ ಸ್ಥಗಿತಗೊಳ್ಳುತ್ತವೆ. ಇದನ್ನು ಹೊರತುಪಡಿಸಿ ಉಳಿದ ಎಲ್ಲ ಮುಖಬೆಲೆಯ ನೋಟುಗಳು ಹಾಗೂ ನಾಣ್ಯಗಳು ಎಂದಿನಂತೆ ಚಲಾವಣೆಯಾಗಲಿದೆ,’’ ಎಂದಿದ್ದಾರೆ.

ವಿತ್‌ಡ್ರಾಗೆ ಮಿತಿ:

ನೋಟುಗಳ ರದ್ದು ಕುರಿತು ಘೋಷಿಸಿರುವ ಮೋದಿ, ಆದಷ್ಟು ಬೇಗ 500 ಮತ್ತು 2,000 ಮುಖಬೆಲೆಯ ನೋಟುಗಳನ್ನು ಪರಿಚಯಿಸುವುದಾಗಿಯೂ ಘೋಷಿಸಿದ್ದಾರೆ. ಜತೆಗೆ, ‘‘ಎಟಿಎಂ ಮೂಲಕ ದಿನಕ್ಕೆ 2 ಸಾವಿರವನ್ನಷ್ಟೇ ಡ್ರಾ ಮಾಡಬಹುದು. ಬ್ಯಾಂಕ್ ಖಾತೆಯಿಂದ ಹಣ ವಿತ್‌ಡ್ರಾ ಮಾಡಬೇಕೆಂದರೆ, ದಿನಕ್ಕೆ 10 ಸಾವಿರ ಮತ್ತು ವಾರಕ್ಕೆ 20 ಸಾವಿರದ ಮಿತಿ ವಿಸಲಾಗಿದೆ. ಬುಧವಾರದಂದು ಬ್ಯಾಂಕುಗಳು ಮುಚ್ಚಿರುತ್ತವೆ, ಕೆಲವು ಎಟಿಎಂಗಳೂ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ನಿಮಗೆ ಸ್ವಲ್ಪ ತೊಂದರೆಯಾಗಬಹುದು. ಆದರೆ, ದೇಶದ ಪುನರ್‌ನಿರ್ಮಾಣ ಕಾರ್ಯದಲ್ಲಿ ಸಾರ್ವಜನಿಕರೂ ಭಾಗವಹಿಸಿದಂತಾಗುತ್ತದೆ. ಇಂತಹ ಅವಕಾಶಗಳು ಜೀವನದಲ್ಲಿ ಯಾವತ್ತೂ ಸಿಗುವುದಿಲ್ಲ. ಸರ್ಕಾರದ ಈ ಕ್ರಮವನ್ನು ರಾಜಕೀಯ ಪಕ್ಷಗಳು, ಕಾರ್ಯಕರ್ತರು, ಸಾಮಾಜಿಕ ಸಂಸ್ಥೆಗಳು ಮತ್ತು ಮಾಧ್ಯಮಗಳು ಯಶಸ್ವಿಗೊಳಿಸುವಂತೆ ಕೋರುತ್ತೇನೆ,’’ ಎಂದಿದ್ದಾರೆ ಮೋದಿ.

‘‘ನಾಗರಿಕರ ಹಣವನ್ನು ಬ್ಯಾಂಕುಗಳಲ್ಲಿ ಡೆಪಾಸಿಟ್ ಮಾಡುವುದರಿಂದ, ಅವರ ಹಣವು ಸುರಕ್ಷಿತವಾಗಿರುತ್ತದೆ. ನಮ್ಮ ದೇಶದಲ್ಲಿ ನಗದು ಚಲಾವಣೆಯ ಪ್ರಕ್ರಿಯೆಯು ನೇರವಾಗಿ ಭ್ರಷ್ಟಾಚಾರದೊಂದಿಗೆ ನಂಟು ಹೊಂದಿದೆ. ಈಗಾಗಲೇ ನಾವು 1.25 ಲಕ್ಷ ಕೋಟಿ ಕಪ್ಪುಹಣವನ್ನು ದೇಶಕ್ಕೆ ವಾಪಸ್ ತಂದಿದ್ದೇವೆ. ಈ ಹಿಂದೆ ಭಾರತವು ಭ್ರಷ್ಟಾಚಾರದ ಜಾಗತಿಕ ರ‌್ಯಾಂಕಿಂಗ್‌ನಲ್ಲಿ 100ನೇ ಸ್ಥಾನದಲ್ಲಿತ್ತು. ಇದೀಗ ಅದು 76ನೇ ಸ್ಥಾನಕ್ಕಿಳಿದಿದೆ. ಕಪ್ಪುಹಣ, ಭಷ್ಟಾಚಾರ ನಿರ್ಮೂಲನೆಗೆ ನಮ್ಮ ಸರ್ಕಾರ ಬದ್ಧವಾಗಿದೆ,’’ ಎಂದೂ ಮೋದಿ ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ- 022-22602201, 22602944

 

Latest Videos
Follow Us:
Download App:
  • android
  • ios