ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರೂ ಕೂಡ ಕಾರು ಖರೀದಿಗಾಗಿ ಸಾಲ ಪಡೆದುಕೊಂಡಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಮುಂಬೈ : ನೀರವ್ ಮೋದಿ ಪಿಎನ್’ಬಿಗೆ ವಂಚನೆ ಮಾಡಿ ದೇಶ ಬಿಟ್ಟು ಇದೀಗ ಪರಾರಿಯಾಗಿದ್ದಾರೆ. ಕೋಟ್ಯಂತರ ರು ವಂಚನೆ ಮಾಡಿದ್ದಾರೆ.
ಆದರೆ ಈ ಬ್ಯಾಂಕಿನಲ್ಲಿ ನಮ್ಮ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರೂ ಕೂಡ ಕಾರು ಖರೀದಿಗಾಗಿ ಸಾಲ ಪಡೆದುಕೊಂಡಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಕಾರು ಖರೀದಿಗಾಗಿ ಶಾಸ್ತ್ರಿ ಅವರು 5000 ರು. ಸಾಲ ಮಾಡಿದ್ದು, ಅವರು ತಾಷ್ಕೆಂಟ್’ಗೆ ತೆರಳಿದ್ದ ವೇಳೆ ನಿಧನ ಹೊಂದಿದರು. ಇದರಿಂದ ಅವರ ಪತ್ನಿ ಲಲಿತಾ ಅವರು ಪಿಂಚಣಿ ಹಣದಿಂದ ಸಾಲವನ್ನು ತೀರಿಸಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.
ಈ ವಿಚಾರವನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ಅವರು ಬಹಿರಂಗ ಮಾಡಿದ್ದಾರೆ. ತಮ್ಮ ತಂದೆ ಸರ್ಕಾರಿ ಕಾರನ್ನು ಬಳಸಲು ಬಿಡುತ್ತಿರಲಿಲ್ಲ. ಆದ್ದರಿಂದ ಕಾರು ಖರೀದಿಸಲು ಬಯಸಿದ್ದರಿಂದ ಸಾಲ ಮಾಡಲಾಗಿತ್ತು ಎಂದು ಹೇಳಿದ್ದಾರೆ
