ಇನ್ಫೋಸಿಸ್'ನಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು ಆಡಳಿತ ಮಂಡಳಿಯ ಹಿರಿಯ ಉದ್ಯೋಗಿಗಳು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡರೆ ಯುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುವುದಿಲ್ಲವೆಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ನವದೆಹಲಿ (ಜೂ.01): ಇನ್ಫೋಸಿಸ್'ನಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು ಆಡಳಿತ ಮಂಡಳಿಯ ಹಿರಿಯ ಉದ್ಯೋಗಿಗಳು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡರೆ ಯುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುವುದಿಲ್ಲವೆಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಂಪನಿಯ ಹಿರಿಯ ಉದ್ಯೋಗಿಗಳು ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡರೆ ಕಿರಿಯ ಉದ್ಯೋಗಿಗಳನ್ನು ಕೆಲಸದಲ್ಲಿ ಮುಂದುವರೆಸಲಾಗುತ್ತದೆ. 2001 ರಲ್ಲಿ ಮಾರುಕಟ್ಟೆಯಲ್ಲಿ ನಮಗೆ ಹಿನ್ನಡೆಯಾದಾಗ ಆಡಳಿತ ಮಂಡಳಿಯ ಹಿರಿಯರೊಂದಿಗೆ ನಾವು ಕುಳಿತು ಮಾತುಕತೆ ನಡೆಸಿದ್ದೆವು. ಯುವ ಉದ್ಯೋಗಿಗಳ ಕೆಲಸವನ್ನು ಉಳಿಸಲು ನಾವೆಲ್ಲರೂ ಸ್ವಲ್ಪ ಮಟ್ಟಿಗೆ ತ್ಯಾಗ ಮಾಡಲು ಸಿದ್ಧವಾಗಿದ್ದೆವು. ಅದೇ ರೀತಿ ಈ ಬಾರಿಯೂ ಒಪ್ಪಿಕೊಂಡರೆ ಯಾರಿಗೂ ಉದ್ಯೋಗ ಕಡಿತ ಮಾಡುವುದಿಲ್ಲವೆಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಐಟಿ ವಲಯದಲ್ಲಿ ಈ ಹಿಂದೆ ಕೂಡಾ ಭಾರೀ ಹಿನ್ನಡೆಯಾಗಿತ್ತು. 2001, 2008 ರಲ್ಲಿ ಬಿಕ್ಕಟ್ಟು ಎದುರಾಗಿತ್ತು. ಅದಕ್ಕೆ ನಾವು ಪರಿಹಾರವನ್ನು ಕಂಡುಕೊಂಡಿದ್ದೆವು. ಹಾಗಾಗಿ ಆತಂಕಗೊಳ್ಳುವ ಅಗತ್ಯವಿಲ್ಲ. ಇವೆಲ್ಲ ಹೊಸದೇನಲ್ಲ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.