Asianet Suvarna News Asianet Suvarna News

ರೂ. 2000 ನೋಟು ನಿಷೇಧವಿಲ್ಲ: ಹಣಕಾಸು ಸಚಿವ ಅರುಣ್ ಜೇಟ್ಲಿ

ರೂ. 2000 ನೋಟಗಳನ್ನು ನಿಷೇಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲವೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ರೂ. 200 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವ ದಿನಾಂಕದ ಕುರಿತು ರಿಸರ್ವ್ ಬ್ಯಾಂಕ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಈ ಸಂದಭದಲ್ಲಿ ಹೇಳಿದ್ದಾರೆ.

Not considering ban on Rs 2000 notes Says Jaitley
  • Facebook
  • Twitter
  • Whatsapp

ನವದೆಹಲಿ: ರೂ. 2000 ನೋಟಗಳನ್ನು ನಿಷೇಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲವೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ರೂ. 200 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವ ದಿನಾಂಕದ ಕುರಿತು ರಿಸರ್ವ್ ಬ್ಯಾಂಕ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಈ ಸಂದಭದಲ್ಲಿ ಹೇಳಿದ್ದಾರೆ.

ರೂ. 2000 ಮುಖಬೆಲೆಯ ನೊಟುಗಳನ್ನು ನಿಷೇಧಿಸುವ ಯೋಚನೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಅರುಣ್ ಜೇಟ್ಲಿ, ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದು ಉತ್ತರಿಸಿದ್ದಾರೆ.

ಕಳೆದ ವರ್ಷ ನ.8 ರಂದು ಕೇಂದ್ರ ಸರ್ಕಾರವು ರೂ.500 ಹಾಗೂ ರೂ.1000 ನೋಟುಗಳನ್ನು ಅಮಾನ್ಯಗೊಳಿಸತ್ತು. ಬಳಿಕ ಹೊಸ ರೂ.500 ಹಾಗೂ ರೂ. 2000 ನೋಟುಗಳನ್ನು ಪರಿಚಯಿಸಿತ್ತು.

Follow Us:
Download App:
  • android
  • ios