ನಾನು ಹಿಂದೂ ವಿರೋಧಿ ಅಲ್ಲ ಎಂದ ಕಮಲ್ ಹಾಸನ್

First Published 3, Feb 2018, 10:01 AM IST
Not An Enemy Of Hindus Says Kamal Haasan
Highlights

ಇತ್ತೀಚೆಗೆ ಹಿಂದು ಉಗ್ರಗಾಮಿತ್ವ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದ ನಟ ಕಮಲ್‌ಹಾಸನ್, ತಮಗೆ ಅಂಟಿರುವ ಹಿಂದು ವಿರೋಧಿ ಪಟ್ಟದಿಂದ ಹೊರ ಬರಲು ಮುಂದಾಗಿದ್ದಾರೆ. 

ಚೆನ್ನೈ: ಇತ್ತೀಚೆಗೆ ಹಿಂದು ಉಗ್ರಗಾಮಿತ್ವ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದ ನಟ ಕಮಲ್‌ಹಾಸನ್, ತಮಗೆ ಅಂಟಿರುವ ಹಿಂದು ವಿರೋಧಿ ಪಟ್ಟದಿಂದ ಹೊರ ಬರಲು ಮುಂದಾಗಿದ್ದಾರೆ. ಪತ್ರಿಕೆಯೊಂದರಲ್ಲಿ ಅಂಕಣ ಬರೆದಿರುವ ಕಮಲ್, ‘ನಾನು ಹಿಂದು ವಿರೋಧಿ ಅಲ್ಲ.

ನಾನು ಯಾರ ಶತ್ರುವೂ ಅಲ್ಲ. ನಾನು ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನು ಸಮಾನವಾಗಿ ನೋಡುತ್ತೇನೆ. ಗಾಂಧಿ, ಅಂಬೇಡ್ಕರ್, ಪೆರಿಯಾರ್ ಅವರನ್ನು ಶಿಕ್ಷಕರನ್ನಾಗಿ ಸ್ವೀಕರಿಸಿದ್ದೇನೆ. ನಾನು ಅವರನ್ನು ಸಮಾನವಾಗಿ ಗೌರ ವಿಸುತ್ತೇನೆ’ ಎಂದು ಹೇಳಿದ್ದಾರೆ.

loader