ಮಂತ್ರಿಗಳ ಕಾರಿಗೆ ಸರ್ಕಾರ ಪೆಟ್ರೋಲ್ ಹಾಕಿಸುತ್ತದೆ. ತೊಂದರೆ ಏನಿದ್ದರೂ ಜನಸಾಮಾನ್ಯರಿಗೆ’ ಎಂದು ವಿವಾದಿತ ಹೇಳಿಕೆ ನೀಡಿದ್ದ ಕೇಂದ್ರ ಸಚಿವರು ಇದೀಗ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. 

ಮುಂಬೈ: ‘ಪೆಟ್ರೋಲ್ ದರ ಏರಿಕೆಯಿಂದ ಮಂತ್ರಿ ಗಳಿಗೆ ಚಿಂತೆಯಿಲ್ಲ. ಏಕೆಂದರೆ ಮಂತ್ರಿಗಳ ಕಾರಿಗೆ ಸರ್ಕಾರ ಪೆಟ್ರೋಲ್ ಹಾಕಿಸುತ್ತದೆ. 

ತೊಂದರೆ ಏನಿದ್ದರೂ ಜನಸಾಮಾನ್ಯರಿಗೆ’ ಎಂದು ವಿವಾದಿತ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಭಾನುವಾರ ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. 

‘ನಾನು ಯಾರ ಮನ ನೋಯಿಸಲೂ ಈ ಹೇಳಿಕೆ ನೀಡಿರಲಿಲ್ಲ. ನನಗೆ ಜನಸಾಮಾನ್ಯರ ಬವಣೆ ಅರ್ಥವಾಗುತ್ತದೆ’ ಎಂದಿದ್ದಾರೆ. 

ಜೈಪುರದಲ್ಲಿ ಶನಿವಾರ ಮಾತನಾಡಿದ್ದ ಅವರು, ‘ನಾನು ಕೇಂದ್ರ ಮಂತ್ರಿ. ನನ್ನ ಕಾರಿಗೆ ಸರ್ಕಾರ ಪೆಟ್ರೋಲ್ ಹಾಕಿಸುತ್ತದೆ. ಹೀಗಾಗಿ ನನಗೆ ದರ ಏರಿಕೆಯ ಬಿಸಿ ತಟ್ಟಿಲ್ಲ ಎಂದಿದ್ದರು.