ಉತ್ತರ ಕೊರಿಯಾವನ್ನು ನಿರ್ನಾಮ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿರುವ ಬೆದರಿಕೆ ‘ನಾಯಿ ಬೊಗಳಿದ ಹಾಗೆ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯೋಂಗ್ ಹೊ ಮೂದಲಿಸಿದ್ದಾರೆ. ವಿಶೇಷವೆಂದರೆ ಅಮೆರಿಕದ ನೆಲದಲ್ಲಿ ಇದ್ದುಕೊಂಡೇ ಅವರು, ಡೊನಾಲ್ಡ್ ಟ್ರಂಪ್ ಅವರನ್ನು ಹೀಗೆ ಹೀಯಾಳಿಸಿದ್ದಾರೆ.

ಸೋಲ್(ಸೆ.22): ಉತ್ತರ ಕೊರಿಯಾವನ್ನು ನಿರ್ನಾಮ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿರುವ ಬೆದರಿಕೆ ‘ನಾಯಿ ಬೊಗಳಿದ ಹಾಗೆ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯೋಂಗ್ ಹೊ ಮೂದಲಿಸಿದ್ದಾರೆ. ವಿಶೇಷವೆಂದರೆ ಅಮೆರಿಕದ ನೆಲದಲ್ಲಿ ಇದ್ದುಕೊಂಡೇ ಅವರು, ಡೊನಾಲ್ಡ್ ಟ್ರಂಪ್ ಅವರನ್ನು ಹೀಗೆ ಹೀಯಾಳಿಸಿದ್ದಾರೆ.

2 ದಿನಗಳ ಹಿಂದಷ್ಟೆ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಭಾಷಣ ಮಾಡಿದ್ದ ಟ್ರಂಪ್, ಒಂದು ವೇಳೆ ಅಮೆರಿಕದ ಮಿತ್ರ ರಾಷ್ಟ್ರಗಳ ತಂಟೆಗೆ ಬಂದರೆ ಉತ್ತರ ಕೊರಿಯಾವನ್ನು ನಿರ್ನಾಮ ಮಾಡು ವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌'ಗೆ ಬಂದಿಳಿದ ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯಾಂಗ್ ಹೊ ಪ್ರತಿಕ್ರಿಯಿಸಿದರು.

1 ನಾಯಿ ಬೊಗಳಿದರೂ ಮೆರವಣಿಗೆ ಮುಂದುವರಿಯತ್ತದೆ’ ಎಂಬ ಮಾತು ಇದೆ. ನಾಯಿ ಬೊಗಳಿದ ಸದ್ದು ಕೇಳಿಸಿ ನಮ್ಮನ್ನು ಬೆದರಿಸಲು ಯತ್ನಿಸಿದರೆ ಅವರು ನಾಯಿಯ ಕನಸು ಕಾಣುತ್ತಿದ್ದಾರೆ’ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಈ ವೇಳೆ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಯದ್ದೋನ್ಮೋಹಿ ಅಮೆರಿಕದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮಗೆ ಪರಮಾಣು ಅಸ್ತ್ರಗಳ ಅವಶ್ಯಕತೆ ಇದೆ.