ಮಹತ್ವದ ನಿರ್ಧಾರವೊಂದನ್ನು ಕೈಗೊಂಡ ಉತ್ತರ ಕೊರಿಯಾ

First Published 14, May 2018, 9:55 AM IST
North Korea says it will dismantle nuclear test site
Highlights

ಶಾಂತಿ ಸ್ಥಾಪನೆ ಉದ್ದೇಶದಿಂದ ಉತ್ತರ ಕೊರಿಯಾ ಪರಮಾಣು ನಿಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರ ಭಾಗವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಐತಿಹಾಸಿಕ ಭೇಟಿಗೂ ಮುನ್ನ ತನ್ನ ಪರಮಾಣು ಪರೀಕ್ಷಾ ಪ್ರದೇಶವನ್ನು ನಾಶ ಮಾಡುವುದಾಗಿ ಉತ್ತರ ಕೊರಿಯಾ ತಿಳಿಸಿದೆ. 

ಸಿಯೋಲ್: ಶಾಂತಿ ಸ್ಥಾಪನೆ ಉದ್ದೇಶದಿಂದ ಉತ್ತರ ಕೊರಿಯಾ ಪರಮಾಣು ನಿಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರ ಭಾಗವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಐತಿಹಾಸಿಕ ಭೇಟಿಗೂ ಮುನ್ನ ತನ್ನ ಪರಮಾಣು ಪರೀಕ್ಷಾ ಪ್ರದೇಶವನ್ನು ನಾಶ ಮಾಡುವುದಾಗಿ ಉತ್ತರ ಕೊರಿಯಾ ತಿಳಿಸಿದೆ. 

ಮೇ 23-25ರ ಅವಧಿಯಲ್ಲಿ ಈ ತಾಣವನ್ನು ನಾಶಗೊಳಿಸುವುದಾಗಿ ಉ. ಕೊರಿಯಾ ಹೇಳಿದೆ. ಕೊರಿಯಾದ ಈ ನಿರ್ಧಾರ ವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದಾರೆ. ಜೂನ್ 12ರಂದು ಸಿಂಗಾಪುರದಲ್ಲಿ ಟ್ರಂಪ್ ಮತ್ತು ಕಿಮ್ ನಡುವೆ ಭೇಟಿ ಆಯೋಜಿಸ ಲಾಗಿದೆ.

loader