ಅಮೆರಿಕವನ್ನು ಸರ್ವನಾಶ ಮಾಡಲು ಒಂದಿಲ್ಲೊಂದು ಬೆದರಿಕೆ ಒಡ್ಡುತ್ತಿರುವ ಉತ್ತರ ಕೊರಿಯಾ, ಈಗ ತನ್ನ ಬದ್ಧವೈರಿ ದೇಶದ ಮೇಲೆ ‘ಇಎಂಪಿ ಬಾಂಬ್’ ಪ್ರಯೋಗ ಮಾಡಬಹುದು ಎಂಬ ಎಚ್ಚರಿಕೆ ತಜ್ಞರಿಂದ ಬಂದಿದೆ. ಈ ದಾಳಿ ನಡೆದರೆ ಅಮೆರಿಕದ ವಿದ್ಯುತ್ ಗ್ರಿಡ್‌ಗಳು ಸ್ತಬ್ಧವಾಗಲಿದ್ದು, ವಿದ್ಯುತ್ ಹಾಗೂ ವಿದ್ಯುನ್ಮಾನ ವ್ಯವಸ್ಥೆಯ ಮೇಲೆಯೇ ಅವಲಂಬಿತವಾಗಿರುವ ಶೇ.90ರಷ್ಟು ಅಮೆರಿಕನ್ನರು 1 ವರ್ಷದ ಅವಧಿಯಲ್ಲಿ ಸಾವನ್ನಪ್ಪಲಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ವಾಷಿಂಗ್ಟನ್(ಅ.18): ಅಮೆರಿಕವನ್ನು ಸರ್ವನಾಶ ಮಾಡಲು ಒಂದಿಲ್ಲೊಂದು ಬೆದರಿಕೆ ಒಡ್ಡುತ್ತಿರುವ ಉತ್ತರ ಕೊರಿಯಾ, ಈಗ ತನ್ನ ಬದ್ಧವೈರಿ ದೇಶದ ಮೇಲೆ ‘ಇಎಂಪಿ ಬಾಂಬ್’ ಪ್ರಯೋಗ ಮಾಡಬಹುದು ಎಂಬ ಎಚ್ಚರಿಕೆ ತಜ್ಞರಿಂದ ಬಂದಿದೆ. ಈ ದಾಳಿ ನಡೆದರೆ ಅಮೆರಿಕದ ವಿದ್ಯುತ್ ಗ್ರಿಡ್ಗಳು ಸ್ತಬ್ಧವಾಗಲಿದ್ದು, ವಿದ್ಯುತ್ ಹಾಗೂ ವಿದ್ಯುನ್ಮಾನ ವ್ಯವಸ್ಥೆಯ ಮೇಲೆಯೇ ಅವಲಂಬಿತವಾಗಿರುವ ಶೇ.90ರಷ್ಟು ಅಮೆರಿಕನ್ನರು 1 ವರ್ಷದ ಅವಧಿಯಲ್ಲಿ ಸಾವನ್ನಪ್ಪಲಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ.
‘ನ್ಯೂಕ್ಲಿಯರ್ ಇಲೆಕ್ಟ್ರೋಮ್ಯಾಗ್ನೆಟಿಕ್ ಪಲ್ಸ್’ ಎಂಬುದು ಇಎಂಪಿ ಬಾಂಬ್'ನ ಸವಿಸ್ತಾರ ರೂಪ. ಅಣು ಸ್ಫೋಟದಿಂದ ಹೊರಹೊಮ್ಮಿದ ರೇಡಿಯೋ ತರಂಗಗಳು ಇಎಂಪಿ ಬಾಂಬ್ ಪ್ರಯೋಗದಿಂದ ಬಿಡುಗಡೆಯಾಗುತ್ತವೆ. ಇವುಗಳಿಂದ ವಿದ್ಯುತ್ ಹಾಗೂ ವಿದ್ಯುನ್ಮಾನ ವ್ಯವಸ್ಥೆಯು ಸಂಪೂರ್ಣ ಹಾಳಾಗುತ್ತದೆ. ಈ ಅಪಾಯ ಸಂ‘ವಿಸಿದರೆ ಪರೋಕ್ಷವಾಗಿ ಶೇ.90ರಷ್ಟು ಅಮೆರಿಕನ್ನರು 1 ವರ್ಷದಲ್ಲಿ ಸಾಯುತ್ತಾರೆ ಎಂದು ಅಮೆರಿಕದ ಇಎಂಪಿ ಕಮಿಶನ್ ನ ತಜ್ಞರಾದ ಡಾ| ವಿಲಿಯಂ ಗ್ರಹಾಂ ಹಾಗೂ ಡಾ| ಪೀಟರ್ ವಿನ್ಸೆಂಟ್ ಪ್ರಾಯ್ ಅವರು ‘ಉತ್ತರ ಕೊರಿಯಾ
ಇಎಂಪಿ ದಾಳಿ:
ಅಸ್ತಿತ್ವ ಬೆದರಿಕೆ’ ಎಂಬ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಮರಿಕದ ಜನಸಂಖ್ಯೆ 32 ಕೋಟಿ ಇದ್ದು, ಈ ಬಾಂಬ್ ದಾಳಿ ನಡೆದರೆ ಅಂದಾಜು 29 ಕೋಟಿ ಜನ ಸಾವನ್ನಪ್ಪಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ಇಎಂಪಿ ಬಾಂಬ್ ಅನ್ನು ಉತ್ತರ ಕೊರಿಯಾ ದಕ್ಷಿಣ ‘ಧ್ರುವದಲ್ಲಿ ಪ್ರಯೋಗಿಸಿದರೆ ಅದರಿಂದ ಬಿಡುಗಡೆಯಾಗುವ ತರಂಗಗಳಿಂದ ಅಮೆರಿಕದ ಇಲೆಕ್ಟ್ರಿಗ್ ಗ್ರಿಡ್'ಗಳ ಅನಿರ್ದಿಷ್ಟ ಅವಧಿಗೆ ಮುಚ್ಚಲ್ಪಡುತ್ತವೆ. ಉತ್ತರ ಕೊರಿಯಾ ಈ ಬಾಂಬ್ ಅನ್ನು ಕ್ಷಿಪಣಿ, ಜಲಾಂತರ್ಗಾಮಿ, ಸಿಡಿತಲೆ ಅಥವಾ ಬಲೂನ್ ಬಳಸಿ ನಡೆಸಬಹುದು. ಕೊನೇ ಪಕ್ಷ ಉತ್ತರ ಕೊರಿಯಾದ ಉಪಗ್ರಹಗಳ ಮೂಲಕವೂ ದಾಳಿ ನಡೆಯಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ದಕ್ಷಿಣ ಕೊರಿಯಾ ಮೇಲೂ ಉ.ಕೊರಿಯಾ ಈ ಪ್ರಯೋಗ ನಡೆಸಬಹುದು. ಹೀಗಾಗಿ ದ.ಕೊರಿಯಾ ಕಟ್ಟೆಚ್ಚರ ವಹಿಸಿದೆ ಎಂದು ವರದಿಯಾಗಿತ್ತು. ‘ಅಮೆರಿಕವನ್ನು ಬೂದಿ ಮಾಡಿಬಿಡುವೆ’ ಎಂಬ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ರಿಂದ ಬಂದಿದ್ದೂ ಇದೇ ಹಿನ್ನೆಲೆಯಲ್ಲಿ ಎಂದು ಹೇಳಲಾಗಿದೆ.
