ಎಸಿಯಿರುವ ರೆಸ್ಟೋರೆಂಟ್’ನಿಂದ ಪಾರ್ಸೆಲ್ ತೆಗೆದುಕೊಂಡು ಹೋದರೂ ಅದಕ್ಕೆ ಇನ್ನುಂದೆ ಶೇ. 18 ರಷ್ಟು ಜಿಎಸ್’ಟಿ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ. ರೆಸ್ಟೋರೆಂಟ್’ನ ಯಾವುದೇ ಒಂದು ಭಾಗದಲ್ಲಿ ಎಸಿಯಿದ್ದರೂ ಸಾಕು ಆ ರೆಸ್ಟೋರೆಂಟ್’ನಿಂದ ತೆಗೆದುಕೊಂಡು ಹೋಗುವ ಪಾರ್ಸೆಲ್’ಗಳಿಗೆ ಜಿಎಸ್’ಟಿ ಬೀಳಲಿದೆ.

ಬೆಂಗಳೂರು (ಆ.14): ಎಸಿಯಿರುವ ರೆಸ್ಟೋರೆಂಟ್’ನಿಂದ ಪಾರ್ಸೆಲ್ ತೆಗೆದುಕೊಂಡು ಹೋದರೂ ಅದಕ್ಕೆ ಇನ್ನುಂದೆ ಶೇ. 18 ರಷ್ಟು ಜಿಎಸ್’ಟಿ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ. ರೆಸ್ಟೋರೆಂಟ್’ನ ಯಾವುದೇ ಒಂದು ಭಾಗದಲ್ಲಿ ಎಸಿಯಿದ್ದರೂ ಸಾಕು ಆ ರೆಸ್ಟೋರೆಂಟ್’ನಿಂದ ತೆಗೆದುಕೊಂಡು ಹೋಗುವ ಪಾರ್ಸೆಲ್’ಗಳಿಗೆ ಜಿಎಸ್’ಟಿ ಬೀಳಲಿದೆ.

ಜು.01 ರಿಂದ ಜಾರಿಯಾದಂತೆ ಎಸಿಯೇತರ ರೆಸ್ಟೋರೆಂಟ್’ಗಳಲ್ಲಿ ಬಿಲ್’ಗಳಿಗೆ 12 % ಜಿಎಸ್’ಟಿ ಅನ್ವಯವಾಗುತ್ತಿತ್ತು. ಎಸಿ ರೆಸ್ಟೋರೆಂಟ್’ಗಳಿಗೆ ಶೇ.18 ರಷ್ಟು ಜಿಎಸ್’ಟಿ ಅನ್ವಯವಾದರೆ ಫೈವ್ ಸ್ಟಾರ್ ಹೋಟೆಲ್’ಗಳಿಗೆ ಶೇ.28 ರಷ್ಟು ಅನ್ವಯವಾಗಲಿದೆ. ರೆಸ್ಟೋರೆಂಟ್ ಹಾಗೂ ಬಾರ್ ಒಂದೇ ಕಡೆ ಇರುವಲ್ಲಿ ಮೊದಲ ಮಹಡಿಯಲ್ಲಿ ಎಸಿಯಿದ್ದು, ನೆಲಮಹಡಿಯಲ್ಲಿ ಎಸಿಯಿಲ್ಲದಿದ್ದರೂ ಅದಕ್ಕೂ ಶೇ.18 ರಷ್ಟು ಜಿಎಸ್’ಟಿ ಅನ್ವಯವಾಗಲಿದೆ ಎಂದು ಕೇಂದ್ರೀಯ ಅಬಕಾರಿ ಮತ್ತು ಸುಂಕ ಆಯೋಗ ಹೇಳಿದೆ.

ರೆಸ್ಟೋರೆಂಟ್’ನ ಯಾವುದೇ ಒಂದು ಭಾಗದಲ್ಲಿ ಎಸಿಯಿದ್ದರೂ ಅಲ್ಲಿ ತೆಗೆದುಕೊಳ್ಳುವ ಎಲ್ಲಾ ಆಹಾರಗಳಿಗೆ ಹಾಗೂ ಅಲ್ಲಿಂದ ತೆಗೆದುಕೊಂಡು ಹೋಗುವ ಪಾರ್ಸೆಲ್’ಗೂ ಶೇ.18 ರಷ್ಟು ಜಿಎಸ್’ಟಿ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ.